7

ವೈಯಕ್ತಿಕ ಸಾಧನೆಯ ತತ್ವಗಳು

Published:
Updated:
ವೈಯಕ್ತಿಕ ಸಾಧನೆಯ ತತ್ವಗಳು

ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಆದರೆ ಬಹುತೇಕ ವೇಳೆ ಒಂದು ಸಣ್ಣ ಸಾಧನೆಯನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಸಾಧಿಸಲು ಅನೇಕ ಅಡೆತಡೆಗಳು ಎದುರಾಗುತ್ತವೆ.

ಸೋಲಿನ ಭೀತಿ ಸಾಧನೆಯ ಹಾದಿಗೆ ಮುಳ್ಳಾಗುತ್ತದೆ. ಕೆಲವೊಮ್ಮೆ ಗುರಿಗಳನ್ನು ಕಾರ್ಯರೂಪಕ್ಕೆ ತರಲಾಗದೆ ಸೋಲನ್ನು ಹಿಂಬಾಲಿಸಬೇಕಾಗುತ್ತದೆ. ಗುರಿಗಳನ್ನು ತಲುಪುವ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಬುದ್ದಿವಂತಿಕೆಗಿಂತ ತಂತ್ರಗಾರಿಕೆಯು ಮುಖ್ಯವಾಗಿರುತ್ತದೆ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶದ ಸದುಪಯೋಗದಿಂದ ಎಲ್ಲರೂ ಆ ಯಶಸ್ಸನ್ನು ಗಳಿಸಬಹುದು. ಅಂತಹ ಕೆಲವು ತಂತ್ರಗಾರಿಕೆ ಮತ್ತು ಸಾಧನೆಯ ತತ್ವಗಳನ್ನು ಕೆಳಗೆ ನೀಡಲಾಗಿದೆ.

ಸಾಧನೆಯ ಮಾರ್ಗಗಳು

* ಸಾಧನೆಯ ಉದ್ದೇಶ ಮತ್ತು ಗುರಿ ತಲುಪುವ ಕಾರ್ಯ ಯೋಜನೆಗಳು ಸ್ಪಷ್ಟವಾಗಿರಬೇಕು.

* ಕೇವಲ ಬುದ್ಧಿ ಇದ್ದರೆ ಸಾಲದು. ಬುದ್ಧಿಯಲ್ಲಿ ಚತುರತೆ ಬಹಳ ಮುಖ್ಯ. ಉದ್ದೇಶವನ್ನು ಸಾಧಿಸಲು ಸಾಮರಸ್ಯದಿಂದ ಕೆಲಸ ಮಾಡುವುದು ಅನಿವಾರ್ಯ. ಸಾಮರಸ್ಯದ ಕೆಲಸಕ್ಕೆ ಸಹಕಾರಿ ತತ್ವದ ಮೈತ್ರಿಯ ತಂತ್ರಗಾರಿಕೆ ತಿಳಿದಿರಬೇಕು.

* ನಂಬಿಕೆ ಎಂಬುದು ಆಸೆ, ಉದ್ದೇಶ ಮತ್ತು ಯೋಜನೆಗಳ ಭೌತಿಕ ಮತ್ತು ಆರ್ಥಿಕ ಸ್ಥಿತಿಯಾಗಿದೆ. ಅದಕ್ಕಾಗಿ ಆನ್ವಯಿಕ ನಂಬಿಕೆ ಅಗತ್ಯ. ಕಾರ್ಯಕ್ಷೇತ್ರದಲ್ಲಿ ನಂಬಿಕೆ ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಪ್ರಯತ್ನ ಅವಶ್ಯಕ.

* ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ತೆಗೆದುಕೊಳ್ಳವಿಕೆ ನಿಮ್ಮನ್ನು ಉನ್ನತ ಹಂತಕ್ಕೆ ತೆಗೆದುಕೊಂಡೊಯ್ಯುತ್ತದೆ. ನೀಡಿದ ಕೆಲಸಕ್ಕಿಂತ ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಜವಾಬ್ದಾರಿಯು ನಿಮ್ಮ ಉತ್ತಮ ಸೇವೆಯನ್ನು ಪ್ರಶಂಸಿಸುವಂತೆ ಮಾಡುತ್ತದೆ. ಅದು ನಿಮ್ಮ ಸಾಧನೆಯ ಸೋಪಾನವಾಗಿದೆ.

* ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ವೈಚಾರಿಕತೆಯ ಲಕ್ಷಣವಾಗಿದೆ. ಸಾಧನೆಯ ಶಿಖರ ತಲುಪಬಯಸುವ ಮುನ್ನ ಇನ್ನೊಬ್ಬರಿಗೆ ಮಾದರಿಯಾಗುವಂತಹ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಗತ್ಯವಾಗಿದೆ.

* ವೈಯಕ್ತಿಕ ಉಪಕ್ರಮ ಸಾಧನೆಯ ಮತ್ತೊಂದು ಮೆಟ್ಟಿಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ವೈಯಕ್ತಿಕ ಭಿನ್ನತೆಯಲ್ಲಿ ತನ್ನದೇ ಆದ ಪದ್ದತಿ ಅಥವಾ ಕ್ರಮಗಳ ಮೂಲಕ ವಿಶೇಷತೆಯನ್ನು ಸಾಧಿಸುವುದೇ ಉಪಕ್ರಮ. ಇದು ಕೆಲಸದ ಪ್ರಾರಂಭದಿಂದ ಹಿಡಿದು ಅದನ್ನು ಯಶಸ್ವಿಯಾಗಿ ಪುರ್ಣಗೊಳಿಸುವವರೆಗಿನ ಎಲ್ಲಾ ಹಂತಗಳ ಕಾರ್ಯ ವಿಧಾನವಾಗಿದೆ. ಸಾಧನೆಗೈದ ಪ್ರತಿಯೊಬ್ಬರೂ ಇದನ್ನು ಬೆಳೆಸಿಕೊಂಡಿರುತ್ತಾರೆ.

* ಸಕಾರಾತ್ಮಕ ಮಾನಸಿಕ ವರ್ತನೆಯು ನಿಮ್ಮನ್ನು ಸಾಧನೆಯ ಉತ್ತುಂಗಕ್ಕೆ ಒಯ್ಯುತ್ತದೆ. ಸಕಾರಾತ್ಮಕತೆಯು ಯಶಸ್ಸನ್ನು ಆಕರ್ಷಿಸುತ್ತದೆ ಮತ್ತು ವೈಫಲ್ಯಗಳನ್ನು ದೂರವಿರಿಸುತ್ತದೆ.

* ಉತ್ಸಾಹವು ಆಂತರಿಕ ಧ್ವನಿಯಾಗಿದ್ದು ಮುಖಭಾವದ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತದೆ ಮತ್ತು ಕಾರ್ಯದ ಯಶಸ್ಸಿಗೆ ಕಾರಣವಾಗುತ್ತದೆ. ಉತ್ಸಾಹದಿಂದ ಕಾರ್ಯದಲ್ಲಿ ನಂಬಿಕೆ ಉಂಟಾಗುತ್ತದೆ.

* ಚಿಂತನೆಯಪಾಂಡಿತ್ಯದಿಂದ ಸ್ವಯಂ ಶಿಸ್ತು ಪ್ರಾರಂಭವಾಗುತ್ತದೆ. ನಿಮ್ಮ ಆಲೋಚನೆಗಳನ್ನು ನೀವು ನಿಯಂತ್ರಿಸದಿದ್ದರೆ ನಿಮ್ಮ ಅಗತ್ಯಗಳನ್ನು ನಿಯಂತ್ರಿಸಲಾಗದು. ಸ್ವಯಂ ಶಿಸ್ತು ತರ್ಕಶಾಸ್ತ್ರದ ಬೋಧನೆಯೊಂದಿಗೆ ನಿಮ್ಮ ಹೃದಯದ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಯಶಸ್ಸು ನಿಮ್ಮದಾಗುತ್ತದೆ.

* ಚಿಂತನೆಯು ಮನುಷ್ಯನಿಗೆ ಅತ್ಯಂತ ಅಪಾಯಕಾರಿ ಅಥವಾ ಪ್ರಯೋಜನಕಾರಿ ಶಕ್ತಿಯಾಗಿದೆ. ಆದರೆ ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮ ಅಡಗಿದೆ. ಆದ್ದರಿಂದ ಸರಿಯಾದ ಅಥವಾ ನಿಖರವಾದ ಚಿಂತನೆಯು ನಿಮ್ಮದಾಗಿರಲಿ.

ಸಾಧನೆಗೆ ನಿರ್ದಿಷ್ಟ ಕಾರ್ಯದಲ್ಲಿನ ಗಮನ ಬಹಳ ಮುಖ್ಯ. ಆದರೆ ಗಮನವು ನಿಮ್ಮ ನಿಯಂತ್ರಣದಲ್ಲಿರಬೇಕು. ಸಾಧನೆಗೆ ಕಾರ್ಯದ ಮೇಲೆ ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸುವುದು ಮತ್ತು ತನ್ನ ಇಚ್ಛೆಯಂತೆ ಅದನ್ನು ನಿರ್ದೇಶಿಸುವುದು ಅಗತ್ಯ.

* ಸಾಂಘಿಕ ಕೆಲಸವು ಉದ್ಯಮದಲ್ಲಿ ಚೈತನ್ಯ ಮೂಡಿಸುತ್ತದೆ. ಸೌಹಾರ್ದಯುತ ಸಹಭಾಗಿತ್ವವು ಸಾಮರಸ್ಯದ ಸಹಕಾರಕ್ಕೆ ಕಾರಣವಾಗುತ್ತದೆ. ಸಾಮರಸ್ಯದ ಸಹಕಾರವು ಅಮೂಲ್ಯ ಆಸ್ತಿಯಾಗಿದ್ದು ಅದರ ಕೊಡುಗೆ ಅನನ್ಯ. ಸಾಧನೆಯ ಹಾದಿಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು.

* ಸಾಧನೆಯ ಹಾದಿಯಲ್ಲಿನ ಕೆಲ ವೈಫಲ್ಯಗಳು ತಾತ್ಕಾಲಿಕ ಸೋಲನ್ನು ಪ್ರತಿನಿಧಿಸುತ್ತವೆ. ಸೋಲಿನ ನಿಖರವಾದ ಕಾರಣವು ಅದನ್ನು ಎದುರಿಸುವ ಮಾರ್ಗ ಸೂಚಿಸುತ್ತವೆ. ಹಾಗಾಗಿ ಸೋಲಿಗೆ ಎದುರದೇ ಅದನ್ನು ಮೆಟ್ಟಿನಿಲ್ಲುವ ತಾಳ್ಮೆ ಬೆಳೆಸಿಕೊಳ್ಳಬೇಕು.

* ಸೃಜನಾತ್ಮಕ ದೃಷ್ಟಿಕೋನವು ಯಶಸ್ಸಿನ ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಕೇವಲ ಬುದ್ಧಿವಂತಿಕೆ ಇದ್ದರೆ ಸಾಲದು. ಅದನ್ನು ಒರೆಗೆ ಹಚ್ಚುವ ಸೃಜನಾತ್ಮಕ ಬುದ್ಧಿವಂತಿಕೆ ಪ್ರತಿಭಾವಂತಿಕೆಯನ್ನು ಗಳಿಸಿಕೊಡುತ್ತದೆ.

* ಮನಸ್ಸಿನ ಶಾಂತಿ ಮತ್ತು ಆರೋಗ್ಯಕ್ಕೆ ಆಹಾರ ಪ್ರಮುಖವಾದದ್ದು. ಧನಾತ್ಮಕ ಆಹಾರ ಪದ್ಧತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry