ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್ಆ್ಯಪ್ ಬಳಕೆಗೆ ಕನಿಷ್ಠ ವಯಸ್ಸು ನಿಗದಿ

Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಯುರೋಪ್ ದೇಶಗಳಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಕನಿಷ್ಠ ವಯೋಮಿತಿಯನ್ನು 16ಕ್ಕೆ ಏರಿಕೆ ಮಾಡಲಾಗಿದೆ. ಯುರೋಪ್ ರಾಷ್ಟ್ರಗಳಲ್ಲಿ ಈ ಹಿಂದೆ ಕನಿಷ್ಠ ವಯೋತಿ 13 ವರ್ಷ ಇತ್ತು. ಈ ದೇಶಗಳಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದತ್ತಾಂಶ ರಕ್ಷಣೆ ಕಾಯ್ದೆಯ ಪ್ರಕಾರ, ಸಾಮಾಜಿಕ ಜಾಲತಾಣಗಳನ್ನು ಬಳಸುವ ಕನಿಷ್ಠ  ವಯೋಮಿತಿಯು 16 ವರ್ಷಕ್ಕೆ ನಿಗದಿ ಮಾಡಲಾಗಿದೆ ವಾಟ್ಸ್‌ಆ್ಯಪ್‌. ಈ ಕಾರಣಕ್ಕೆ ವಾಟ್ಸ್‌ಆ್ಯಪ್‌  ಬಳಕೆಯ ಕನಿಷ್ಠ ವಯೋಮಿತಿಯನ್ನು 16 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದಲ್ಲದೇ ದತ್ತಾಂಶ ಸೋರಿಕೆ ತಡೆಗೂ ಹೊಸ ಅಪ್ಲಿಕೇಷನ್‌ ಶೀಘ್ರದಲ್ಲಿಯೇ  ಪರಿಚಯಿಸುವುದಾಗಿ ವಾಟ್ಸ್‌ಆ್ಯಪ್‌ ತಿಳಿಸಿದೆ.

ಏಂಜೆಲ್ ಬ್ರೋಕಿಂಗ್, ಏಂಜೆಲ್ ಬೀ
ರಿಟೇಲ್‌ ಹೂಡಿಕೆ ಕಂಪನಿ ಏಂಜೆಲ್‌ ಬ್ರೋಕಿಂಗ್‌,  ಏಂಜೆಲ್ ಬ್ರೋಕಿಂಗ್, ಏಂಜೆಲ್ ಬೀ ಎಂಬ ಮೊಬೈಲ್ ಅಪ್ಲಿಕೇಷನ್‍ಗಳನ್ನು ಪರಿಚಯಿಸಿದೆ. ಈ ಆ್ಯಪ್‌ಗಳ ಮೂಲಕ ಗ್ರಾಹಕರಿಗೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಸಲಹೆಗಳನ್ನು ನೀಡಲಿದೆ.   ಉನ್ನತ ತಂತ್ರಜ್ಞಾನ  ಎಆರ್‌ಕ್ಯು (ARQ) ಜತೆಗೆ ಏಂಜಲ್ ಬೀ, ಏಂಜೆಲ್ ಬ್ರೋಕಿಂಗ್ ಆ್ಯಪ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಗ್ರಾಹಕರು ತಮ್ಮ ಹಣಕಾಸು ಹೂಡಿಕೆಗಾಗಿ ವಿವಿಧ ಕಂಪನಿಗಳಲ್ಲಿ ಹುಡುಕಾಟ ನಡೆಸುತ್ತಾರೆ. ಇದನ್ನು ಗಮನದಲ್ಲಿ ಇರಿಸಿಕೊಂಡು  ಏಂಜೆಲ್ ಬ್ರೋಕಿಂಗ್ ಮತ್ತು  ಏಂಜೆಲ್ ಬೀ ಆ್ಯಪ್ ಸೇವೆ  ಆರಂಭಿಸಿದೆ. 

ಏಂಜೆಲ್ ಬೀ ಕೃತಕ ಬುದ್ಧಿಮತ್ತೆ ಹಾಗೂ ಮಾಹಿತಿ ವಿಶ್ಲೇಷಣೆಯ ವಿಶಿಷ್ಟ ಉತ್ಪನ್ನವಾಗಿದ್ದು, ತ್ವರಿತ ಪರಿಹಾರಗಳೊಂದಿಗೆ ಗ್ರಾಹಕರಿಗೆ ಸಲಹೆಗಳನ್ನು ನೀಡಲಾಗುತ್ತದೆ. ಈ ಆ್ಯಪ್ ಗ್ರಾಹಕರಿಗೆ ಅತ್ಯುತ್ತಮ ಮ್ಯೂಚುವಲ್ ಫಂಡ್ ಶಿಫಾರಸುಗಳು, ತೆರಿಗೆ ಉಳಿತಾಯ, ಗುರಿ ನಿರ್ವಹಣೆ ಬಗ್ಗೆ ನೆರವು ನೀಡಲಿದೆ.

*

ನೇತ್ರ ತಪಾಸಣೆಗೆ ಐ ಡಿಸೀಸ್‌ ಆ್ಯಪ್ 
ನೊವೋತ್ರಿಸ್‌ ಡಿಜಿಟಲ್‌ ಕಂಪನಿಯೂ ನೇತ್ರ ತಪಾಸಣೆಯ ದತ್ತಾಂಶ ಸಂಗ್ರಹ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದಕ್ಕೆ ಐ ಡಿಸೀಸ್‌ ಆ್ಯಪ್ ಎಂದು ಹೆಸರಿಡಲಾಗಿದೆ. ಕಣ್ಣು ಪರೀಕ್ಷೆ ಮಾಡಿಸಿಕೊಂಡ ರೋಗಿಯ ಎಲ್ಲಾ ರೀತಿಯ ಮಾಹಿತಿ ಈ ಆ್ಯಪ್‌ನಲ್ಲಿ ಸಂಗ್ರಹವಾಗಲಿದೆ.  ನೇತ್ರ ತಪಾಸಣೆ ಮಾಡುವ ವೈದ್ಯರು ಬದಲಾದರೂ ಆ ಆ್ಯಪ್‌ನಲ್ಲಿರುವ ರೋಗಿಯ ಮಾಹಿತಿಯ ಅನುಸಾರ ಮತ್ತೊಬ್ಬ ವೈದ್ಯರು ಚಿಕಿತ್ಸೆ ನೀಡಬಹುದಾಗಿದೆ. ಪ್ರಸ್ತುತ ಈ ಆ್ಯಪ್‌ ಐಒಎಸ್‌ ಮಾದರಿಯಲ್ಲಿ ದೊರೆಯಲಿದೆ.

ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆ್ಯಪ್ ಹೆಚ್ಚು ಉಪಯೋಗವಾಗಲಿದೆ ಎಂದು ನೊವೋತ್ರಿಸ್‌ ಡಿಜಿಟಲ್‌ ಕಂಪನಿಯ ವ್ಯಾಸ್ ನರಸಿಂಹನ್ ತಿಳಿಸಿದ್ದಾರೆ. ರೋಗಿಯ ತಪಾಸಣೆ ಮತ್ತು ಚಿಕಿತ್ಸೆಯ ಮಾಹಿತಿಯನ್ನು ವೈದ್ಯರು ನೇರವಾಗಿ ಇದರಲ್ಲಿ ಅಪ್‌ಲೋಡ್ ಮಾಡಬಹುದು.  ರೋಗಿಯು ಕೂಡ ತನ್ನ ಕಣ್ಣಿನ ಸಮಸ್ಯೆಗಳ ಬಗ್ಗೆಯೂ ಇದರಲ್ಲಿ ಅಪ್‌ಲೋಡ್ ಮಾಡಬಹುದು. ವೈದ್ಯರು ದೂರದ ಸ್ಥಳದಲ್ಲಿ ಇದ್ದಾಗಲೂ ಆ್ಯಪ್ ಮೂಲಕ ರೋಗಿಗಳಿಗೆ ಚಿಕಿತ್ಸೆ ವಿಧಾನವನ್ನು ತಿಳಿಸಬಹುದು ಎಂದು ನರಸಿಂಹನ್ ತಿಳಿಸಿದ್ದಾರೆ.

ಉಚಿತ ವೈಫೈ ಸಂಪರ್ಕದ ಲಿಂಕ್‌
ಉಚಿತ ವೈಫೈ ಸಂಪರ್ಕ ಮತ್ತು ಇಂಟರ್‍ನೆಟ್ ಹಂಚಿಕೆ ಆ್ಯಪ್ ಆದ ‘ಲಿಂಕ್’, ದೆಹಲಿ ಮತ್ತು ಬೆಂಗಳೂರಿನಲ್ಲಿ ಬಳಕೆಗೆ ಬಂದಿದೆ. ಒಂದು ನಗರಕ್ಕೆ ಸಂಪೂರ್ಣ ವೈಫೈ ಸೌಲಭ್ಯ ನೀಡಲು ಮತ್ತು ಬಳಕೆದಾರರಿಗೆ ಇಂಟರ್‍ನೆಟ್ ಉಚಿತವಾಗಿ ಲಭ್ಯವಾಗುವಂತೆ ಮಾಡುವ ದೇಶದಲ್ಲಿನ ಮೊದಲ ಪ್ರಯತ್ನವಾಗಿದೆ. ಈ ಆ್ಯಪ್ ದೆಹಲಿಯ ಶೇ 60ಕ್ಕೂ ಹೆಚ್ಚಿನ ಜನರಿಗೆ ಈಗಾಗಲೇ ವೈಫೈ ಸೌಲಭ್ಯ ನೀಡಿದೆ. ಬಳಕೆದಾರರು ತಾವು ಇರುವ 500 ಮೀಟರ್‍ಗಳ ವ್ಯಾಪ್ತಿ ಪ್ರದೇಶದಲ್ಲಿ ಉಚಿತ ವೈಫೈ ಹಾಟ್‍ಸ್ಪಾಟ್ ಕಂಡುಕೊಳ್ಳಬಹುದಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ ಟ್ರಾಯ್’ ನಿಯಮಗಳಿಗೆ ಅನುಗುಣವಾದ ವೈಫೈ ಸಂಪರ್ಕವನ್ನು ನೀಡಲಾಗುತ್ತಿದೆ.  ಈಗಾಗಲೇ ಸ್ಥಾಪಿಸಲಾಗಿರುವ 10,000 ಉಚಿತ ಹಾಟ್‍ಸ್ಪಾಟ್‍ಗಳೊಂದಿಗೆ ಬಳಕೆದಾರರಿಗೆ ಸೀಮಾತೀತ ಇಂಟರ್‍ನೆಟ್ ಸಂಪರ್ಕ ಹೊಂದಲು ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರಿನಲ್ಲಿಯೂ ಉಚಿತ ವೈಫೈ ಸೌಲಭ್ಯ ಒದಗಿಸಲಾಗುತ್ತಿದೆ. ಕೋರಮಂಗಲ, ಇಂದಿರಾನಗರ ಮತ್ತು ವೈಟ್‍ಫೀಲ್ಡ್ ಮುಂತಾದ ಪ್ರದೇಶಗಳು ಇದರಲ್ಲಿ ಸೇರಿವೆ. ವ್ಯಾಪಾರಿಗಳು, ಸಾಮಾನ್ಯ ಗ್ರಾಹಕರು ಲಿಂಕ್‍ನೊಂದಿಗೆ ಸಹಯೋಗ ಹೊಂದಿದ್ದಾರೆ. ಸಣ್ಣ ನಗರಗಳನ್ನೂ ಸಂಪೂರ್ಣ ವೈಫೈ ವಲಯಗಳನ್ನಾಗಿ ಮಾಡಲು ಸಂಸ್ಥೆ ಉದ್ದೇಶಿಸಿದೆ.

ಉಚಿತ ಸಾರ್ವಜನಿಕ ವೈಫೈ ಸೌಲಭ್ಯವು ಡಿಜಿಟಲ್ ಮೂಲಸೌಕರ್ಯಕ್ಕೆ ಕೊಡುಗೆ ನೀಡಲಿದೆ. ದೇಶದಲ್ಲಿ ಡಿಜಿಟಲ್ ಸಾಕ್ಷರತೆಗೆ ಇದರಿಂದ ಬೆಂಬಲ ದೊರೆಯಲಿದೆ. 2023ರ ಹೊತ್ತಿಗೆ ಇಡೀ ದೇಶದಲ್ಲಿ ಉಚಿತ ವೈಫೈ ಸೌಲಭ್ಯ ನೀಡುವ ಉದ್ದೇಶವನ್ನು ಕಂಪನಿ ಹೊಂದಿದೆ.  ಬಳಕೆದಾರರು ತಾವು ಇರುವ ಸ್ಥಳದಲ್ಲಿ 500 ಮೀಟರ್‍ಗಳ ಒಳಗೆ ವೈಫೈ ಹಾಟ್‍ಸ್ಪಾಟ್‍ಗಳನ್ನು ಕಂಡುಕೊಂಡಲು ಈ ಆ್ಯಪ್ ನೆರವಾಗುತ್ತವೆ. ಮೊಬೈಲ್‌ ಪರದೆ ಮೇಲೆ ಗ್ರಾಹಕರು ಇರುವ ಸ್ಥಳ ಹಾಗೂ ಹಾಟ್‍ಸ್ಪಾಟ್ ಇರುವ ದೂರ ಹಾಗೂ ದಿಕ್ಕಿನ ಮಾಹಿತಿ ದೊರೆಯುತ್ತದೆ.

*



ಕ್ಷಯ ರೋಗ ಚಿಕಿತ್ಸೆಗೆ ಹೊಸ ಆ್ಯಪ್‌ 
ಅಮೆರಿಕದ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕ್ಷಯ ರೋಗದ ಚಿಕಿತ್ಸೆಗಾಗಿ ಸ್ಮಾರ್ಟ್‌ ಫೋನ್‌ ಆ್ಯಪ್‌ ವಿನ್ಯಾಸ ಮಾಡಿದ್ದಾರೆ. ಇದರಲ್ಲಿ  ವಿಡಿಯೊ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ. ರೋಗಿಗಳ ಮಾಹಿತಿ, ಚಿಕಿತ್ಸೆ ವಿಧಾನ, ಔಷಧಿಯ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ದಾಖಲಿಸಬಹುದು. ರೋಗಿಗಳು, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಸಂವಹನಕ್ಕೆ ಈ ಆ್ಯಪ್ ಸೇತುವೆಯಾಗಲಿದೆ.

ಹಳ್ಳಿ ಪ್ರದೇಶಗಳಲ್ಲಿರುವ ಕ್ಷಯ ರೋಗಿಗಳಿಗೆ ಈ ಆ್ಯಪ್ ಹೆಚ್ಚು ಉಪಯೋಗಕ್ಕೆ ಬರಲಿದೆ. ಪದೇ ಪದೇ ಆಸ್ಪತ್ರೆಗೆ ತೆರಳುವುದು ತಪ್ಪುತ್ತದೆ. ವೈದ್ಯರು ನೀಡಿದ ಔಷಧಿಯನ್ನು ರೋಗಿಗಳು ಖರೀದಿಸಿ ಉಪಯೋಗಿಸಬಹುದು. ಇದರಲ್ಲಿ ರೋಗಿಯ ಸಂಪೂರ್ಣ ಮಾಹಿತಿಯನ್ನು ದಾಖಲು ಮಾಡಲಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT