‘ಹಂಗ್‌’ಗೆ ಕೊಂಡಿ

7

‘ಹಂಗ್‌’ಗೆ ಕೊಂಡಿ

Published:
Updated:

‘ಬಿಜೆಪಿ ಸಹವಾಸ ಮಾಡಿದರೆ ಕುಮಾರಸ್ವಾಮಿಯನ್ನು ಕುಟುಂಬದಿಂದ ಬಹಿಷ್ಕರಿಸುತ್ತೇನೆ’ ಎಂಬುದು ದೊಡ್ಡ ಗೌಡರ ಗುಡುಗು.

ಕೋಮುವಾದಿಗಳ ಸಹವಾಸವೇ ಬೇಡವೆಂಬುದು ಕಾಂಗ್ರೆಸ್‌ ತೀರ್ಮಾನ. ಬಲಪಂಥ– ಎಡಪಂಥ ಎಂದು ಉಪದ್ವ್ಯಾಪ ಮಾಡಿಕೊಂಡು ಹಾವು– ಮುಂಗುಸಿಯಂತೆ ಐದು ವರ್ಷಗಳಿಂದ ಕಚ್ಚಾಡಿ ಎಲ್ಲ ಪಕ್ಷದವರೂ ಜನರಿಗೆ ಮನರಂಜನೆ ನೀಡಿದರು. ಅವರ ಹಂಗು ಇವರಿಗೆ ಬೇಡ, ಇವರ ಹಂಗು ಅವರಿಗೆ ಬೇಡ. ಹಾಗಾದರೆ ‘ಹಂಗ್’ ಸರ್ಕಾರಕ್ಕೆ ಕೊಂಡಿಯಂತೂ ಕಡ್ಡಾಯವಾದೀತು.

ಒಂದೇ ಪಕ್ಷದ ಸರ್ಕಾರವೆನ್ನಲು, ಯಾವ ರಾಜಕೀಯ ಪಕ್ಷವೂ ಜನರ ನಂಬಿಕೆ ಉಳಿಸಿಕೊಂಡಿಲ್ಲ. ಉಳಿಸಿ ಬೆಳೆಸಿ

ಕೊಳ್ಳುವ ನಿಯಮವಾಗಲೀ, ಸೌಜನ್ಯ, ನಿಷ್ಠೆ, ಸಿದ್ಧಾಂತ, ಭಯ–ಭೀತಿ, ನಾಚಿಕೆಯಾಗಲೀ ಯಾವ ಪಕ್ಷಕ್ಕೂ ಇಲ್ಲವಾ

ಗಿದೆ. ಲಜ್ಜೆಗೆಟ್ಟ ನಡೆ–ನುಡಿಯೇ ಇಂದಿನ ರಾಜಕಾರಣದ ನೀತಿ ಎಂದು ಭಾವಿಸಿದಂತಿದೆ.

ಹೊಸ ಸರ್ಕಾರವಾದರೂ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಕೆಲಸ ಮಾಡುವಂತಾಗಲಿ.

ಆರ್.ಎನ್. ಸತ್ಯನಾರಾಯಣ ರಾವ್, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry