ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಬೀತಾದ ಪ್ರಜ್ಞಾವಂತಿಕೆ

Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಈ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಮತದಾರರ ಪ್ರಜ್ಞಾವಂತಿಕೆಗೆ ಸ್ಪಷ್ಟ ನಿದರ್ಶನವಾಗಿದೆ.

ಇದೇನೂ ಹೊಸತಲ್ಲ. ಆಡಳಿತ ಸಮರ್ಪಕವಾಗಿಲ್ಲದೆ ಇದ್ದಾಗ ಮತದಾರರು ವಿವೇಚನೆಯ ನಿರ್ಧಾರ ಕೈಗೊಂಡು, ಅಧಿಕಾರ ನಡೆಸಿದವರನ್ನು ಕುರ್ಚಿಯಿಂದ ಕೆಳಗಿಳಿಸಿದ ಹಲವು ಉದಾಹರಣೆಗಳಿವೆ. ಈ ಚುನಾವಣೆಯಲ್ಲಿ ಮತದಾರರು ಮತ್ತೆ ಅದೇ ಮನೋಭಾವ ವ್ಯಕ್ತಪಡಿಸಿದ್ದಾರೆ. ಹೇಗೆ ಆಡಳಿತ ನಡೆಸಿದರೂ ಜನ ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾರೆ ಎಂಬ ರಾಜಕಾರಣಿಗಳ ಮನೋಧರ್ಮಕ್ಕೆ ಬಲುದೊಡ್ಡ ಏಟು ಬಿದ್ದಿದೆ.

ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಕ್ಕೂ ಇದು ಪಾಠವಾಗಬೇಕು. ಜನಪರವಾದ ಆಡಳಿತ ಕೊಟ್ಟು, ಮತದಾರರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ಈ ಮೂಲಕ ಪ್ರಜಾಪ್ರಭುತ್ವದ ಗೆಲುವು ಸಾಧಿತವಾಗಬೇಕಿದೆ.

– ವಿಶ್ವನಾಥ ಎನ್., ನೇರಳಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT