7

ನಮ್ಮ ಸ್ಪಿನ್ನರ್‌ಗಳು ಭಾರತಕ್ಕೆ ಸವಾಲಾಗಲಿದ್ದಾರೆ: ಅಸ್ಗರ್‌ ಸ್ತಾನಿಕ್‌ಝಾಯ್‌

Published:
Updated:
ನಮ್ಮ ಸ್ಪಿನ್ನರ್‌ಗಳು ಭಾರತಕ್ಕೆ ಸವಾಲಾಗಲಿದ್ದಾರೆ: ಅಸ್ಗರ್‌ ಸ್ತಾನಿಕ್‌ಝಾಯ್‌

ನವದೆಹಲಿ: ‘ನಮ್ಮಲ್ಲಿರುವ ಉತ್ತಮ ಸ್ಪಿನ್‌ ಬೌಲರ್‌ಗಳು ಜೂನ್‌ನಲ್ಲಿ ನಡೆಯುವ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಭಾರತದ ಬಲಾಢ್ಯ ಬ್ಯಾಟಿಂಗ್‌ಗೆ ಸವಾಲೊಡ್ಡಲಿದ್ದಾರೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ಅಸ್ಗರ್‌ ಸ್ತಾನಿಕ್‌ಝಾಯ್‌ ಹೇಳಿದ್ದಾರೆ.

‘ಕೌಂಟಿ ಕ್ರಿಕೆಟ್‌ ಸಂಬಂಧ ವಿರಾಟ್‌ ಕೊಹ್ಲಿ ಅವರು ಆ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ, ಭಾರತ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ತನ್ನ ತವರಿನಲ್ಲಿ ಅದು ಹೆಚ್ಚಿನ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ.’ ಎಂದು ಅವರು ಹೇಳಿದ್ದಾರೆ.

‘ನಮ್ಮ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಆದರೆ, ಗೆಲ್ಲಬೇಕೆಂಬ ಛಲದೊಂದಿಗೆ ಕಣಕ್ಕಿಳಿಯಲಿದ್ದೇವೆ. ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ನಮ್ಮ ಸ್ಪಿನ್ನರ್‌ಗಳಿಗಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಭಾರತ–ಅಫ್ಗಾನಿಸ್ತಾನ ಟೆಸ್ಟ್‌ ಪಂದ್ಯವು ಜೂನ್‌ 14ರಿಂದ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry