ಅನುಪಮಾ ಶೆಣೈಗೆ 1634 ಮತ

7

ಅನುಪಮಾ ಶೆಣೈಗೆ 1634 ಮತ

Published:
Updated:
ಅನುಪಮಾ ಶೆಣೈಗೆ 1634 ಮತ

ಉಡುಪಿ: ಭಾರತೀಯ ಜನಶಕ್ತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಕೇವಲ 1,634 ಮತ ಪಡೆಯುವ ಮೂಲಕ, ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.

ಆಟೊ ರಿಕ್ಷಾದಲ್ಲಿ ಹಾಗೂ ಮನೆಮನೆಗೆ ತೆರಳಿ ಅವರು ಪ್ರಚಾರ ನಡೆಸಿದ್ದರು. ಅವರಿಗೆ ಬೆಂಡೆಕಾಯಿ ಗುರುತು ನೀಡಲಾಗಿತ್ತು. ಅದೇ ಕ್ಷೇತ್ರದ ಉಚ್ಚಿಲ ಗ್ರಾಮ ಅವರ ಸ್ವಂತ ಊರು.

ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಮಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಎಂ.ಸಿ.ಮದನ್‌ ಕೇವಲ 708 ಮತ ಗಳಿಸಿದ್ದಾರೆ.

ವ್ಯಕ್ತವಾಗದ ವಿರೋಧ: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಈ ಬಾರಿಯ ಚುನಾವಣೆಯಲ್ಲಿ ‘ನೋಟಾ’ ಮತ ಚಲಾಯಿಸಬೇಕು ಎಂದು ಪರಿಸರ ಸಂಘಟನೆಗಳು ಕರೆ ಕೊಟ್ಟಿದ್ದವು. ಆದರೆ ಅದಕ್ಕೆ ಅಂತಹ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಸುಳ್ಯ ಕ್ಷೇತ್ರದಲ್ಲಿ ಮಾತ್ರ ನೋಟಾಕ್ಕೆ ಗರಿಷ್ಠ ಮತ (1,310) ಚಲಾವಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry