5

ಸವಾಲೇ ಆಗದ ಸೋದರರು!

Published:
Updated:

ಬೆಂಗಳೂರು: ಸೊರಬ ಕ್ಷೇತ್ರದ ಸೋದರರ ಸವಾಲ್‌ನಲ್ಲಿ ಬಿಜೆಪಿಯ ಕುಮಾರ ಬಂಗಾರಪ್ಪ ಜಯಗಳಿಸಿದ್ದರೆ, ಕುಣಿಗಲ್‌ ಕ್ಷೇತ್ರದಲ್ಲಿ ‘ಡಿ–ಬ್ರದರ್ಸ್‌’ ಖ್ಯಾತಿಯ ಡಿ.ನಾಗರಾಜಯ್ಯ ಹಾಗೂ ಡಿ.ಕೃಷ್ಣಕುಮಾರ್ ಇಬ್ಬರೂ ಸೋತಿದ್ದಾರೆ.

ಅಣ್ಣ–ತಮ್ಮಿಂದರ ತೀವ್ರ ಹಣಾಹಣಿ ಇದ್ದ ಕಾರಣ ಈ ಎರಡೂ ಕ್ಷೇತ್ರಗಳ ಫಲಿತಾಂಶ ಕುತೂಹಲ ಕೆರಳಿಸಿತ್ತು. ಕುಮಾರ ಬಂಗಾರಪ‍್ಪ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ತಮ್ಮ ಮಧು ಬಂಗಾರಪ್ಪ ವಿರುದ್ಧ 13,286 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಹಾಗೆಯೇ ಕುಣಿಗಲ್‌ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಕಣಕ್ಕೆ ಇಳಿದಿದ್ದ ‘ಡಿ–ಬ್ರದರ್ಸ್‌’ಗೆ, ಸಚಿವ ಡಿ.ಕೆ.ಶಿವಕುಮಾರ್ ನೆಂಟ ಡಾ.ಎಚ್‌.ಡಿ.ರಂಗನಾಥ್‌ ಸೋಲಿನ ರುಚಿ ತೋರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry