ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರ ದೌಡು

7

ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರ ದೌಡು

Published:
Updated:
ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರ ದೌಡು

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಗೆ ಮುಂದಾಗಿದ್ದು, ಮುಂದಿನ ನಡೆ ಕುರಿತು ಕಾಂಗ್ರೆಸ್‌ ಬುಧವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ.

ಕೆಪಿಸಿಸಿ ಕಚೇರಿಯತ್ತ ಶಾಸಕರು ದೌಡಾಯಿಸುತ್ತಿದ್ದು, ಬೆಳಿಗ್ಗೆ ಕೆಪಿಸಿಸಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ ಅವರು ಕಚೇರಿಗೆ ಬಂದಿದ್ದು, ಶಾಸಕರಿಗಾಗಿ ಕಾಯುತ್ತಿದ್ದಾರೆ. 

ದಾವಣಗೆರೆಯಲ್ಲಿ ಗೆಲುವು ಕಂಡ ಶಾಸಕ ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್‌, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಅನಿಲ್ ಚಿಕ್ಕಮಾದು, ಭೈರತಿ ಸುರೇಶ್, ರೂಪಾ ಶಶಿಧರ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ ಪಾಟೀಲ್ ಸೇರಿದಂತೆ 20 ಶಾಸಕರು ಕಚೇರಿಗೆ ಬಂದಿದ್ದಾರೆ.

ಪಕ್ಷದ ಎಲ್ಲಾ ವಿಜೇತ ಶಾಸಕರು ಸಭೆ ಹಾಜರಾಗುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ.

ಅತಂತ್ರ ಫಲಿತಾಂಶ ಬಂದ ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟ ಮಂಗಳವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡನೆಗೆ ಮನವಿ ಸಲ್ಲಿಸಿದ್ದಾರೆ.

ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ: ಶಿವಶಂಕರಪ್ಪ

ಸಭೆಗೆ ಬಂದ ಶಾಮನೂರು ಶಿವಶಂಕರಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ವೀರಶೈವ ಲಿಂಗಾಯತ ಶಾಸಕರೂ ಕಾಂಗ್ರೆಸ್ ಬಿಡಲ್ಲ. ಇದೆಲ್ಲ ಊಹಸಪೋಹದ ಸುದ್ದಿ ಎಂದರು.

* ಇವನ್ನೂ ಓದಿ...

ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry