ಜಾದವ್‌ ಗೆಲುವು: ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ಆಚರಣೆ

7
ಚಿಂಚೋಳಿ: ಡಾ.ಉಮೇಶ ಜಾಧವ್‌ ಗೆಲುವು, ವಿಜಯೋತ್ಸವ

ಜಾದವ್‌ ಗೆಲುವು: ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ಆಚರಣೆ

Published:
Updated:

ಚಿಂಚೋಳಿ: ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಉಮೇಶ ಜಾಧವ್‌ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರಿಂದ ತಾಲ್ಲೂಕಿ ನಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಸಂಭ್ರಮ ಆಚರಿಸಿದರು.

ಚಿಂಚೋಳಿ ತಾಂಡೂರು ಅಂತರ ರಾಜ್ಯ ರಸ್ತೆಯಲ್ಲಿ ಗೆಲುವಿನ ಸಂಭ್ರಮಾಚರಣೆ ನಡೆಸಿದ ಯುವಕರು, ಉಮೇಶ ಜಾಧವ್‌ ಮತ್ತು ಕಾಂಗ್ರೆಸ್‌ ಪಕ್ಷದ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು.

ಬೈಕ್‌ ರ್‍ಯಾಲಿ: ಚಿಂಚೋಳಿ ಮತ್ತು ಚಂದಾಪುರದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿ ಜಯಘೋಷಗಳನ್ನು ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಚಿಂಚೋಳಿಯ ಬಡಿ ದರ್ಗಾದಿಂದ ಚಂದಾಪುರ, ಗಂಗೂ ನಾಯಕ ತಾಂಡಾ ಮತ್ತು ಹೊಸ ಬಡಾವಣೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್‌ ಬಾವುಟ ಹೊತ್ತು ಯುವಕರು ಬೈಕ್‌ಗಳಲ್ಲಿ ಸಂಚರಿಸಿ ಸಂಭ್ರಮಿಸಿದರು.

ಕಲ್ಲೂರು ರೋಡ್‌ ವರದಿ: ತಾಲ್ಲೂಕಿನ ಕಲ್ಲೂರು ರೋಡ್‌ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಸದಸ್ಯ ಜಗನ್ನಾಥ ಈದಲಾಯಿ ನೇತೃತ್ವದಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿದರು.

ತಾಲ್ಲೂಕಿನ ಕೋಡ್ಲಿ, ಕುಂಚಾವರಂ, ತುಮಕುಂಟಾ, ಐನಾಪುರ, ಚಂದನಕೇರಾ ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕಾಳಗಿ ವರದಿ: ಡಾ.ಉಮೇಶ ಜಾಧವ್ ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ವಿಜಯೋತ್ಸವ ಆಚರಿಸಿದರು.

‘ಜನಸ್ನೇಹಿ ಆಡಳಿತಕ್ಕೆ ಜಯ’: ಜನಸ್ನೇಹಿ ಆಡಳಿತದ ಜತೆಗೆ ಅಭಿವೃದ್ಧಿಯ ಕೈ ಹಿಡಿದ ಚಿಂಚೋಳಿ ಮತಕ್ಷೇತ್ರದ ಜನರು, ಶಾಸಕ ಡಾ. ಉಮೇಶ ಜಾಧವ್‌ ಅವರನ್ನು ಮರು ಆಯ್ಕೆ ಮಾಡಿದ್ದಾರೆ.

1983ರಿಂದ ಚಿಂಚೋಳಿ ಮತಕ್ಷೇತ್ರದಲ್ಲಿ ಗೆದ್ದ ಶಾಸಕರು ನಿರಂತರ ಎರಡನೇ ಬಾರಿಗೆ ಗೆದ್ದ ನಿದರ್ಶನವಿಲ್ಲ. ಆದರೆ, ಉಮೇಶ ಜಾಧವ್‌ ಅವರು 2013 ಮತ್ತು 2018ರಲ್ಲಿ ಗೆದ್ದು ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಬೀತು ಪಡಿಸಿದ್ದಾರೆ. 2013 ರಲ್ಲಿ 26,026 ಮತಗಳ ಅಂತರದಿಂದ ಕೆಜೆಪಿಯ ಸುನೀಲ ವಲ್ಲ್ಯಾಪುರ ಅವರನ್ನು ಸೋಲಿಸಿದರು.

 2018ರ ಚುನಾವಣೆಯಲ್ಲಿ ಮತ್ತೊಮ್ಮೆ ವಲ್ಲ್ಯಾಪುರ ಅವರನ್ನು 24 ಸಾವಿರ ಮತಗಳ ಅಂತರ ಪರಾಭವಗೊಳಿಸಿದ್ದಾರೆ.

‘ಜನಸ್ನೇಹಿ ಆಡಳಿತಕ್ಕೆ ಜಯ’

ಚಿಂಚೋಳಿ: ಜನಸ್ನೇಹಿ ಆಡಳಿತದ ಜತೆಗೆ ಅಭಿವೃದ್ಧಿಯ ಕೈ ಹಿಡಿದ ಚಿಂಚೋಳಿ ಮತಕ್ಷೇತ್ರದ ಜನರು, ಶಾಸಕ ಡಾ. ಉಮೇಶ ಜಾಧವ್‌ ಅವರನ್ನು ಮರು ಆಯ್ಕೆ ಮಾಡಿದ್ದಾರೆ.

1983ರಿಂದ ಚಿಂಚೋಳಿ ಮತಕ್ಷೇತ್ರದಲ್ಲಿ ಗೆದ್ದ ಶಾಸಕರು ನಿರಂತರ ಎರಡನೇ ಬಾರಿಗೆ ಗೆದ್ದ ನಿದರ್ಶನವಿಲ್ಲ. ಆದರೆ, ಉಮೇಶ ಜಾಧವ್‌ ಅವರು 2013 ಮತ್ತು 2018ರಲ್ಲಿ ಗೆದ್ದು ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಬೀತು ಪಡಿಸಿದ್ದಾರೆ.

2013 ರಲ್ಲಿ 26,026 ಮತಗಳ ಅಂತರದಿಂದ ಕೆಜೆಪಿಯ ಸುನೀಲ ವಲ್ಲ್ಯಾಪುರ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ ಡಾ. ಉಮೇಶ ಗೋಪಾಲ ದೇವ ಜಾಧವ್‌,  2018ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯ ಸುನೀಲ ವಲ್ಲ್ಯಾಪುರ ಅವರನ್ನು 24 ಸಾವಿರ ಮತಗಳ ಅಂತರ ಪರಾಭವಗೊಳಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.

2013 ರಿಂದ 2018 ರವರೆಗೆ ಉಮೇಶ ಜಾಧವ್‌ ಜಿಲ್ಲೆಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಬಡವರ ಪರ ಕಾಳಜಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಮತ್ತು ಜನಸ್ನೇಹಿ ಆಡಳಿತಕ್ಕೆ ಮತದಾರರು ಸೈ ಎಂದಿದ್ದಾರೆ.

ಚಿಂಚೋಳಿಯಲ್ಲಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯ ಕೊರತೆಯೂ ಉಮೇಶ ಜಾಧವ್‌ ಅವರಿಗೆ ಬಲ ನೀಡಿದೆ. ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಮತ್ತು ಕೋಲಿ ಸಮಾಜ ಬಾಂಧವರ ಮತಗಳು ಕಾಂಗ್ರೆಸ್‌ನಿಂದ ಕೈತಪ್ಪುವ ಆತಂಕ ಎದುರಾಗಿತ್ತು.

ಫಲಿತಾಂಶ ಹೊರ ಬಂದಾಗ ಎಂದಿನಂತೆ ಲಂಬಾಣಿ, ಮುಸ್ಲಿಂ, ಕುರುಬ, ದಲಿತ ಎಡ ಮತ್ತು ಬಲ ವರ್ಗದ ಮತಗಳ ಜತೆಗೆ ಲಿಂಗಾಯತ ಹಾಗೂ ಕೋಲಿ ಸಮಾಜ, ರೆಡ್ಡಿ ಸಮುದಾಯದ ಮತಗಳು ಕಾಂಗ್ರೆಸ್‌ ಕೈ ಹಿಡಿದಿದ್ದರಿಂದ ಮತ್ತೆ ಉಮೇಶ ಜಾಧವ್‌ ಅವರಿಗೆ ಸುಲಭದ ಗೆಲುವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry