ತಮ್ಮಣ್ಣ, ಪುಟ್ಟರಾಜುಗೆ ಸಚಿವ ಸ್ಥಾನ?

7

ತಮ್ಮಣ್ಣ, ಪುಟ್ಟರಾಜುಗೆ ಸಚಿವ ಸ್ಥಾನ?

Published:
Updated:

ಮಂಡ್ಯ: ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದರೆ ಜಿಲ್ಲೆಯಿಂದ ಆಯ್ಕೆಯಾಗಿರುವ ಏಳು ಜೆಡಿಎಸ್‌ ಶಾಸಕರಲ್ಲಿ ಯಾರು ಸಚಿವರಾಗುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿದೆ.

ಡಿ.ಸಿ.ತಮ್ಮಣ್ಣ ಹಾಗೂ ಸಿ.ಎಸ್‌.ಪುಟ್ಟರಾಜು ಇಬ್ಬರಿಗೂ ಸಚಿವ ಸ್ಥಾನ ಒಲಿದು ಬರುತ್ತದೆ ಎಂಬು ಸುದ್ದಿ ಹರಡಿದೆ. ಆದರೆ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದರೆ ಇಬ್ಬರಲ್ಲಿ ಯಾರ ಹೆಸರನ್ನು ವರಿಷ್ಠರು ಅಂತಿಮಗೊಳಿಸುತ್ತಾರೆ ಎಂಬ ಸುದ್ದಿ ಈಗ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಡಿ.ಸಿ.ತಮ್ಮಣ್ಣ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಪಾರ ಅನುಭವಉಳ್ಳವರಾಗಿದ್ದು ಅವರೇ ಸಚಿವರಾಗುತ್ತಾರೆ. ಜೊತೆಗೆ ತಮ್ಮಣ್ಣ ಅವರು ಎಚ್‌.ಡಿ.ದೇವೇಗೌಡರ ಬೀಗರೂ ಆಗಿರುವ ಕಾರಣ ಬೀಗತನ ಸರ್ಕಾರ ರಚನೆಯಲ್ಲಿ ಪ್ರಮುಖವಾಗುತ್ತದೆ ಎಂಬ ಅಭಿಪ್ರಾಯ ಜಿಲ್ಲೆಯಲ್ಲಿ ಇದೆ. ಸಿ.ಎಸ್‌.ಪುಟ್ಟರಾಜು ಅವರು ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಜೊತೆಗೆ ಅವರು ಜೆಡಿಎಸ್‌ನಲ್ಲಿ ಜಿಲ್ಲಾ ನಾಯಕರಾಗಿದ್ದಾರೆ. ಈ ಕಾರಣದಿಂದ ಅವರಿಗೆ ಸಚಿವಸ್ಥಾನ ಸಿಗಬಹುದು ಎಂಬ ಚರ್ಚೆಯೂ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry