ನಿರೀಕ್ಷೆ ಮೀರಿ ಮತದಾರರ ಬೆಂಬಲ ಸಿಕ್ಕಿದೆ

7
ಬೀರೂರು: ಬಿಜೆಪಿ ವಿಜಯೋತ್ಸವದಲ್ಲಿ ಬೆಳ್ಳಿಪ್ರಕಾಶ್‌ ಹೇಳಿಕೆ

ನಿರೀಕ್ಷೆ ಮೀರಿ ಮತದಾರರ ಬೆಂಬಲ ಸಿಕ್ಕಿದೆ

Published:
Updated:

ಬೀರೂರು: ಕಡೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಯುಕ್ತ ಮಂಗಳವಾರ ಸಂಜೆ ಬೀರೂರು ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಚುನಾವಣಾ ಫಲಿತಾಂಶ ಘೋಷಣೆಯಾದ ಮಧ್ಯಾಹ್ನವೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಬೈಕ್ ರ್ಯಾಲಿ ನಡೆಸಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಎಲ್ಲ ವಾರ್ಡ್‍ಗಳಲ್ಲಿ ಸಂಚರಿಸಿದರು.

ಫಲಿತಾಂಶ ಪ್ರಕಟವಾದ ಬಳಿಕ ಚಿಕ್ಕಮಗಳೂರಿನಲ್ಲಿ ಪ್ರಮಾಣಪತ್ರ ಪಡೆದು ಸರಸ್ವತೀಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಬಿಸಲೇಹಳ್ಳಿ ಗೇಟ್, ದೊಡ್ಡಬುಕ್ಕಸಾಗರ, ಲಕ್ಷ್ಮೀಪುರ, ಸರಸ್ವತೀಪುರ, ಚನ್ನೇನಹಳ್ಳಿ ಮೊದಲಾದ ಕಡೆ ಮತದಾರರಿಗೆ ಅಭಿನಂದನೆ ಸಲ್ಲಿಸಿ, ಕಡೂರು ಕನಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆಯಲ್ಲಿ ಕಚೇರಿಗೆ ಬಂದು ನಂತರ ಬೀರೂರು ಪಟ್ಟಣಕ್ಕೆ ಬಂದ ಬೆಳ್ಳಿಪ್ರಕಾಶ್, ಅವರ ಅಭಿಮಾನಿ ಆರ್.ವಿ.ರವಿ ಅವರ ಮನೆಯಲ್ಲಿ ಊಟ ಮಾಡಿದರು. ತರಳಬಾಳು ಕಲ್ಯಾಣ ಮಂಟಪದ ಬಳಿ ಹೂಮಾಲೆ ಹಾಕಿ ಸ್ವಾಗತಿಸಿದ ಕಾರ್ಯಕರ್ತರು, ಬಳಿಕ ತೆರೆದ ವಾಹನದಲ್ಲಿ ಅವರನ್ನು ಡ್ರಂಸೆಟ್ ಮತ್ತು ಡಿಜೆ ಸಂಗೀತದೊಡನೆ ಮೆರವಣಿಗೆಯಲ್ಲಿ ಕರೆತಂದರು.

ಈ ಹಂತದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್, ‘ಕ್ಷೇತ್ರದ ಮತದಾರರು ಬದಲಾವಣೆಗಾಗಿ ಮತ್ತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಬಿಜೆಪಿ ಬೆಂಬಲಿಸಿದ್ದಾರೆ. ಜನರ ಕನಸು ನನಸಾಗಿಸಲು ಬೆಳ್ಳಿಪ್ರಕಾಶ್ ದುಡಿಯಲಿದ್ದಾರೆ’ ಎನ್ನುವ ಭರವಸೆ ವ್ಯಕ್ತಪಡಿಸಿದರು.

ವಿಜೇತ ಅಭ್ಯರ್ಥಿ ಬೆಳ್ಳಿಪ್ರಕಾಶ್ ಮಾತನಾಡಿ, ‘ಮತದಾರರು ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ, ಈ ಬೆಂಬಲಕ್ಕಾಗಿ ಮತದಾರರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿ, ಬೀರೂರು ಪಟ್ಟಣ, ಕಡೂರು ಪಟ್ಟಣಗಳ ಅಭಿವೃದ್ಧಿ, ಕ್ಷೇತ್ರದ ಹಳ್ಳಿಗಳ ಸಮಸ್ಯೆಗಳನ್ನು ಬಗೆಹರಿಸಿ, ರೈತಪರ ನಿಲುವು ತಳೆದು, ಅವರ ಆಶಯಗಳು ಮತ್ತು ಚುನಾವಣಾ ಸಂದರ್ಭದಲ್ಲಿ ನೀಡಿದ ಘೋಷಣೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ಮೆರವಣಿಗೆಯಲ್ಲಿ ಚುನಾವಣಾ ಏಜೆಂಟ್ ಶಾಮಿಯಾನಾ ಚಂದ್ರು, ಬಿಜೆಪಿ ನಗರ ಘಟಕ ಅಧ್ಯಕ್ಷ ಬಿ.ಎಂ.ರುದ್ರಪ್ಪ, ಪುರಸಭಾಧ್ಯಕ್ಷೆ ಸವಿತಾ ರಮೇಶ್, ಸದಸ್ಯರಾದ ಎಂ.ಪಿ.ಸುದರ್ಶನ್, ಎಸ್.ಎಲ್.ಮಂಜುನಾಥ್, ನಾಗರಾಜ್, ಮಾಜಿಅಧ್ಯಕ್ಷ ಎಸ್.ರಮೇಶ್, ಎಸ್‍ಸಿ, ಎಸ್‍ಟಿ ಮೋರ್ಚಾ ಅಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್, ಯುವಮೋರ್ಚಾದ ಮಲ್ಲಿಕಾರ್ಜುನ್, ಮುಖಂಡ ಆರ್.ವಿ.ರವಿ, ಎಲ್.ಪ್ರಕಾಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry