ಕೆ.ಎಂ.ಶಿವಲಿಂಗೇಗೌಡ ಹ್ಯಾಟ್ರಿಕ್‌ ಗೆಲುವು

7

ಕೆ.ಎಂ.ಶಿವಲಿಂಗೇಗೌಡ ಹ್ಯಾಟ್ರಿಕ್‌ ಗೆಲುವು

Published:
Updated:

ಅರಸೀಕೆರೆ: ಕ್ಷೇತ್ರದ ಜೆ.ಡಿಎಸ್‌ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ 93,986 ಮತ ಪಡೆಯುವ ಮೂಲಕ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿದ್ದಾರೆ. ಪ್ರತಿ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಜಿ.ಬಿ ಶಶಿಧರ್‌ 43694 ಸಾವಿರ ಮತ ಗಳಿಸಿದರು.

ಪ್ರಥಮ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಶಿವಲಿಂಗೇಗೌಡ, ಅಂತಿಮವಾಗಿ 50,292 ಮತಗಳ ಅಂತರದಿಂದ  ಗೆಲುವಿನನಗೆ ಬೀರಿದರು. ಇವರು, 2008ರ ಚುನಾವಣೆಯಲ್ಲಿ 74,025 ಹಾಗೂ 2013ರಲ್ಲಿ 76,579 ಮತ ಪಡೆದಿದ್ದರು, ಎರಡೂ ಬಾರಿ ಕಾಂಗ್ರೆಸ್‌ ಪಕ್ಷದ ಬಿ.ಶಿವರಾಂ ವಿರುದ್ಧ ಜಯಗಳಿಸಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ ಹೊರಗಿನವರು ಕಣಕ್ಕಿಳಿದಿದ್ದು, ಈ ಚುನಾವಣೆಯಲ್ಲಿ  ವೀರಶೈವರ ಮತಗಳು ಧ್ರುವೀಕರಣವಾಗಿ ಆಗಲಿವೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಫಲಿತಾಂಶ ಕುತೂಹಲ ಕೆರಳಿಸಿತ್ತು.

ಕ್ಷೇತ್ರದ ಇತಿಹಾಸದಲ್ಲಿ ಇದು ಅಭ್ಯರ್ಥಿಯೊಬ್ಬರ ಮೊದಲ ಹ್ಯಾಟ್ರಿಕ್‌ ಗೆಲುವು. ಮತ ಎಣಿಕೆ ಕೇಂದ್ರದಿಂದ ಹೊರಬಂದ ಶಿವಲಿಂಗೇಗೌಡರ ಪರ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿ ಸ್ವಾಗತಿಸಿದರು.

ಅರಸೀಕೆರೆಯತ್ತ ಹೊರಟ ಅವರಿಗೆ ಬಾಗೇಶಪುರ, ಹಾರನಹಳ್ಳಿ, ಯಳವಾರೆ ಗೀಜೀಹಳ್ಳಿ ಸೇರಿ ವಿವಿಧೆಡೆ ಬೆಂಬಲಿಗರು ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಸಂಜೆ 5ಕ್ಕೆ ನಗರವನ್ನು ತಲುಪಿದ್ದು ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯ ಕರ್ತರು ಹಾರ ಹಾಕಲು ಮುಗಿ ಬಿದ್ದರು. ಇವರನ್ನು ತಹ ಬದಿಗೆ ತರಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ವಿಜಯೋತ್ಸವ: ತೆರೆದ ವಾಹನದಲ್ಲಿ ಶಿವಲಿಂಗೇಗೌಡರರನ್ನು ಪಿ.ಪಿ.ವೃತ್ತದವರೆಗೂ ಕೆರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗೇಗೌಡರು, ‘ಕ್ಷೇತ್ರದ ಅಭಿವೃದ್ದಿ ಮೆಚ್ಚಿ ಜನತೆ ಮತ್ತೆ ಆಶೀರ್ವದಿಸಿದ್ದಾರೆ. ಲಿಂಗಾಯತ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ’ ಎಂದರು. ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ತಾ.ಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ ಉಪಾಧ್ಯಕ್ಷ ಹಾಗೂ ವಿವಿಧ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry