ತಾಪ್ಸಿ ಮತ್ತೆ ಅಮಿತಾಭ್‌ ಜತೆ

7

ತಾಪ್ಸಿ ಮತ್ತೆ ಅಮಿತಾಭ್‌ ಜತೆ

Published:
Updated:
ತಾಪ್ಸಿ ಮತ್ತೆ ಅಮಿತಾಭ್‌ ಜತೆ

‘ಪಿಂಕ್‌’ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಜತೆ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ನಟಿ ತಾಪ್ಸಿ ಈಗ ಮತ್ತೊಮ್ಮೆ ಬಚ್ಚನ್‌ ಅವರ ಜತೆ ನಟಿಸಲು ಸಜ್ಜಾಗಿದ್ದಾರೆ.

ಖ್ಯಾತ ನಿರ್ದೇಶಕ ಸುಜಯ್‌ ಘೋಶ್‌ ನಿರ್ದೇಶನದ ‘ಬದ್ಲಾ’ ಸಿನಿಮಾದಲ್ಲಿ ಈ ಇಬ್ಬರೂ ನಟಿಸಲಿದ್ದಾರೆ. ಕ್ರೈಂ ಥ್ರಿಲ್ಲರ್‌ ಕಥೆ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಜೂನ್‌ ಎರಡನೇ ವಾರದಲ್ಲಿ ಲಂಡನ್‌ ಮತ್ತು ಸ್ಕಾಟ್‌ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಈ ಸಿನಿಮಾವನ್ನು ಸುನೀಲ್‌ ಖೇತರ್‌ಪಾಲ್‌ ನಿರ್ಮಿಸುತ್ತಿದ್ದಾರೆ.

ಅಮಿತಾಭ್‌, ತಾಪ್ಸಿ ನಟನೆಯ ‘ಪಿಂಕ್‌’ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ದೊರಕಿತ್ತು. ಸಿನಿ ಅಭಿಮಾನಿಗಳ ಮೇಲೆ ಮೋಡಿ ಮಾಡಿದ್ದ ಈ ಜೋಡಿ ಇದೀಗ ‘ಬದ್ಲಾ’ ಸಿನಿಮಾದಲ್ಲೂ ಒಟ್ಟಿಗೆ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry