ಕೆಂಪು ಹಾಸಿನ ಮೇಲೆ ಮದುವಣಗಿತ್ತಿ

ಕಾನ್ಸ್ ಉತ್ಸವದ ಕೆಂಪು ರತ್ನಗಂಬಳಿಯ ಮೇಲೆ ಅರಳಿನಿಂತ ಶ್ವೇತಗುಲಾಬಿಯಂತೆ ಸೋನಂ ಕಂಗೊಳಿಸಿದರು. ಅರಿಷಿಣದಾರದ ಮೈ ಎಂಬಂತೆ ಮೊಣಕೈಗುಂಟ ಮೆಹೆಂದಿಯ ಕೆಂಪು ಎದ್ದು ಕಾಣುತ್ತಿದೆ. ಮದುವೆಯಾಗಿ ವಾರವಾಗಿಲ್ಲ... ಆಗಲೇ ಅನಿಲ್ ಅಹುಜಾ ಅವರನ್ನು ಬಿಟ್ಟು ಕಾನ್ಸ್‌ನಲ್ಲಿ ಹೆಜ್ಜೆಹಾಕಿದಳು ಈ ಎಳೆಬೆರಳುಗಳ ಚಿಗರೆಕಂಗಳ ಹುಡುಗಿ.
ಬಿಳಿ ಬಣ್ಣದ ಲೆಹಂಗಾ ಧರಿಸಿರುವ ಸೋನಂ ಉಂಗುರ ಮತ್ತು ಓಲೆಗಳನ್ನು ಮಾತ್ರ ಧರಿಸಿದ್ದಾರೆ. ಗೌರವರ್ಣದ ಈ ಹುಡುಗಿ ನಡುನೆತ್ತಿ ಕಾಣುವಂತೆ ಎರಡೂ ಕಡೆ ಕೂದಲನ್ನು ಬಾಚಿ ಇಳಿಬಿಟ್ಟಿದ್ದಾರೆ. ಫ್ಯಾಷನ್ ಫ್ರೀಕ್ ಎಂದೇ ಹೆಸರಾಗಿರುವ ಸೋನಂ ಏನು ಮಾಡಿದರೂ ಅದರಲ್ಲಿ ಹೊಸತನದ ಸ್ಪರ್ಶವಿರುತ್ತದೆ. ಪ್ರತಿಸಲವೂ ಭಾರತೀಯ ಉಡುಗೆಗೆ ಪಾಶ್ಚಿಮಾತ್ಯ ಸ್ಪರ್ಶ ನೀಡುವಂಥ ಪ್ರಯತ್ನಗಳಿಗೆ ಇವರು ರೂಪದರ್ಶಿಯಾಗುವುದು ಎಲ್ಲ ವಿನ್ಯಾಸಕರಿಗೂ ತಿಳಿದ ವಿಷಯವಾಗಿದೆ.
ಬಾರ್ಬಿ ಗೊಂಬೆಗಳಿಗೆ ರೂಪದರ್ಶಿಯಾಗಿರುವ ಕೆಲವೇ ತಾರೆಯರಲ್ಲಿ ಸೋನಂ ಕಪೂರ್ ಸಹ ಒಬ್ಬರು. ಕಾಲ್ಪನಿಕ ಲೋಕದಿಂದ ಧರೆಗಿಳಿದು ಬಂದ ಸುಂದರಿ ಹೆಜ್ಜೆಹಾಕಿದಂತೆ ಸೋನಂ ಕಾನ್ಸ್‌ನ ರತ್ನಗಂಬಳಿಯ ಮೇಲೆ ಹೆಜ್ಜೆ ಹಾಕಿದರು. ನವಮದುವಣಗಿತ್ತಿಯ ಗಾಂಭೀರ್ಯ, ಸ್ನಿಗ್ಧಸೌಂದರ್ಯವೇ ಮೈತಳೆದಂತೆ!
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.