ಪಿಎನ್‌ಬಿ ಹಗರಣ: ಚೋಕ್ಸಿ ವಿರುದ್ಧ ಆರೋಪಪಟ್ಟಿ

7

ಪಿಎನ್‌ಬಿ ಹಗರಣ: ಚೋಕ್ಸಿ ವಿರುದ್ಧ ಆರೋಪಪಟ್ಟಿ

Published:
Updated:
ಪಿಎನ್‌ಬಿ ಹಗರಣ: ಚೋಕ್ಸಿ ವಿರುದ್ಧ ಆರೋಪಪಟ್ಟಿ

ನವದೆಹಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ವಿರುದ್ಧ ಸಿಬಿಐ ಬುಧವಾರ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಚೋಕ್ಸಿ ಒಡೆತನದ ಗೀತಾಂಜಲಿ ಸಮೂಹ ಸಂಸ್ಥೆಗಳು ಸೇರಿದಂತೆ 17 ಕಂಪನಿ ಮತ್ತು ವ್ಯಕ್ತಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸುತ್ತಿರುವ ಎರಡನೇ ಆರೋಪಪಟ್ಟಿ ಇದಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ನೀರವ್‌ ಮೋದಿ, ಆತನ ಸಹೋದರ ನಿಶಾಲ್‌ ಮೋದಿ, ಅಲಹಾಬಾದ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ ಸೇರಿದಂತೆ 22 ಜನರ ವಿರುದ್ಧ ಸಿಬಿಐ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ, ಅದರಲ್ಲಿ ಚೋಕ್ಸಿ ಹೆಸರು ಇರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry