ದೇಶದ ಸ್ವಚ್ಛ ನಗರ ಮೈಸೂರು

7
ಘನತ್ಯಾಜ್ಯ ನಿರ್ವಹಣೆ: ಮಂಗಳೂರು, ಹುಣಸೂರಿಗೆ ಕಿರೀಟ

ದೇಶದ ಸ್ವಚ್ಛ ನಗರ ಮೈಸೂರು

Published:
Updated:
ದೇಶದ ಸ್ವಚ್ಛ ನಗರ ಮೈಸೂರು

ನವದೆಹಲಿ: ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳಲ್ಲಿ ಮೈಸೂರು ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರು ಅತ್ಯುತ್ತಮ ನಗರ ಮತ್ತು ಮೈಸೂರು ಜಿಲ್ಲೆಯ ಹುಣಸೂರು ಅತ್ಯುತ್ತಮ ಪಟ್ಟಣವಾಗಿ ಹೊರಹೊಮ್ಮಿವೆ.

ದೇಶದ ನಗರ ಮತ್ತು ಪಟ್ಟಣಗಳಲ್ಲಿ ನೈರ್ಮಲ್ಯವನ್ನು ಪರಿಶೀಲಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿದ  ಸ್ವಚ್ಛ ಸರ್ವೇಕ್ಷಣಾ 2018 ವರದಿಯನ್ನು ಕೇಂದ್ರ ವಸತಿ ಸಚಿವ ಹರದೀಪ್‌ ಸಿಂಗ್ ಪುರಿ ಬುಧವಾರ ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮಧ್ಯಪ್ರದೇಶದ ಇಂದೋರ್‌, ಭೋಪಾಲ್‌ ಮತ್ತು ಚಂಡಿಗಡ ಕ್ರಮವಾಗಿ ಮೊದಲ ಮೂರು ಸ್ವಚ್ಛ ನಗರಗಳು ಎಂಬ ಕೀರ್ತಿಗೆ ಭಾಜನವಾಗಿವೆ.

ಸತತ ಎರಡನೇ ವರ್ಷವೂ ಇಂದೋರ್‌ ಮತ್ತು ಭೋಪಾಲ್‌ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ.

ಸ್ವಚ್ಛತಾ ಆಂದೋಲನ ಅನುಷ್ಠಾನದಲ್ಲಿ ಜಾರ್ಖಂಡ್‌, ಮಹಾ ರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯಗಳು ಅತ್ಯುತ್ತಮ ಸಾಧನೆಮಾಡಿವೆ ಎಂದು ಪುರಿ ಹೇಳಿದ್ದಾರೆ.

*

ಸಮೀಕ್ಷೆಯ ವಿವರ

* ಕಳೆದ ವರ್ಷ 430 ನಗರಗಳಲ್ಲಿ ಮಾತ್ರ ನಡೆದಿದ್ದ ಸಮೀಕ್ಷೆ

* ಈ ಬಾರಿ ದೇಶದ ಒಟ್ಟು 4,200 ನಗರ ಮತ್ತು ಪಟ್ಟಣಗಳಲ್ಲಿ ಸಮೀಕ್ಷೆ

* ನಾಗರಿಕರ ಅಭಿಪ್ರಾಯಗಳಿಗೂ ಮನ್ನಣೆ

* ಮಹಾನಗರ ಪಾಲಿಕೆ ಹೊಂದಿರುವ ನಗರಗಳ ಪೈಕಿ ದೆಹಲಿ ಮೊದಲು

* ಹತ್ತು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ವಿಜಯವಾಡಕ್ಕೆ ಸ್ಥಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry