‘ಎಸ್ ಸರ್/ಮೇಡಂ’ ಅಲ್ಲ.. ‘ಜೈ ಹಿಂದ್’!

7

‘ಎಸ್ ಸರ್/ಮೇಡಂ’ ಅಲ್ಲ.. ‘ಜೈ ಹಿಂದ್’!

Published:
Updated:

ಭೋಪಾಲ್ : ಮಧ್ಯಪ್ರದೇಶದ ಎಲ್ಲ ಶಾಲೆಗಳಲ್ಲಿ ಹಾಜರಾತಿಗೆ ಪ್ರತಿಕ್ರಿಯಿಸುವ ವೇಳೆ ವಿದ್ಯಾರ್ಥಿಗಳು ಎಂದಿನಂತೆ ‘ಎಸ್‌ ಸರ್’ ಎನ್ನುವ ಬದಲು ‘ಜೈ ಹಿಂದ್’ ಎಂದು ಹೇಳಬೇಕಿದೆ. ಇತ್ತೀಚಿನ ಸರ್ಕಾರಿ ಆದೇಶದ ಪ್ರಕಾರ ಬರುವ ಶೈಕ್ಷಣಿಕ ವರ್ಷದಿಂದ ಈ ಆದೇಶ ಜಾರಿಗೆ ಬರಲಿದೆ.

ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ಈ ಆದೇಶ ಹೊರಡಿಸಲಾಗಿದೆ ಎಂದು ಶಿಕ್ಷಣ ಸಚಿವ ವಿಜಯ್ ಷಾ ಹೇಳಿದ್ದಾರೆ. ಈ ಸಂಬಂಧ ರಾಜ್ಯದ 1.22 ಲಕ್ಷ ಸರ್ಕಾರಿ ಹಾಗೂ 35 ಸಾವಿರ ಖಾಸಗಿ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

‘ಎಸ್ ಸರ್’, ‘ಎಸ್ ಮೇಡಂ’ ಅಥವಾ ‘ಪ್ರೆಸೆಂಟ್’ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರೆ, ಅವರು ಏನನ್ನು ಸಾಧಿಸಿದಂತಾಗುತ್ತದೆ ಎಂದು ಸಚಿವರು

ಪ್ರಶ್ನಿಸಿದ್ದಾರೆ.

ಕಳೆದ ವರ್ಷದಿಂದ ರಾಜ್ಯದ ಎಲ್ಲ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿತ್ಯವೂ ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry