ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆ

7

ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆ

Published:
Updated:
ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆ

ನವದೆಹಲಿ : ಮುಂದಿನ ತಿಂಗಳು ಕೊನೆಗೊಳ್ಳಲಿರುವ 2017–18ರ ಸಾಲಿನ ಬೆಳೆ ವರ್ಷದಲ್ಲಿನ ಆಹಾರ ಧಾನ್ಯಗಳ ಉತ್ಪಾದನೆಯು 27.95 ಕೋಟಿ ಟನ್‌ಗಳಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.

ಉತ್ತಮ ಮುಂಗಾರು ಮತ್ತು ಗರಿಷ್ಠ ಬೆಂಬಲ ಬೆಲೆಯ ಕಾರಣಕ್ಕೆ ಈ ದಾಖಲೆ ಪ್ರಮಾಣದ ಉತ್ಪಾದನೆ ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2017–18ರ ಜುಲೈನಿಂದ ಜೂನ್‌ ಅವಧಿಯಲ್ಲಿ ಅಕ್ಕಿ, ಗೋಧಿ, ಒರಟು ಧಾನ್ಯ ಮತ್ತು ಬೇಳೆಕಾಳುಗಳಲ್ಲಿ ಸಾರ್ವಕಾಲಿಕ ದಾಖಲೆ ಉತ್ಪಾದನೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 1.6ರಷ್ಟು ಹೆಚ್ಚಳವಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

2016–17ರಲ್ಲಿ 27.51 ಕೋಟಿ ಟನ್‌ ಉತ್ಪಾದನೆಯಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ 44 ಲಕ್ಷ ಟನ್‌ಗಳಷ್ಟು ಉತ್ಪಾದನೆ ಹೆಚ್ಚಳವಾಗಿದೆ. ಸಣಬಿನ ಉತ್ಪಾದನೆಯು 1.06 ಕೋಟಿ ಬೇಲ್ಸ್‌ಗಳಷ್ಟು (1 ಬೇಲ್ಸ್‌ = 180 ಕೆಜಿ) ಇರಲಿದೆ. ಇದು ಹಿಂದಿನ ವರ್ಷಕ್ಕಿಂತ ಕಡಿಮೆ ಇರಲಿದೆ.

ಬೇಳೆ ಕಾಳು ಮತ್ತು ಸಕ್ಕರೆ ಉತ್ಪಾದನೆ ಹೆಚ್ಚಳದಿಂದ ಅವುಗಳ ಮಾರಾಟ ಬೆಲೆಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇದು ಬೆಳೆಗಾರರ ಸಂಕಷ್ಟ ಹೆಚ್ಚಿಸಿದೆ. ಬಿತ್ತನೆಯಾದ ನಂತರ ಸರ್ಕಾರವು ಇದುವರೆಗೆ ನಾಲ್ಕು ಬಾರಿ ಉತ್ಪಾದನಾ ಅಂದಾಜು ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry