ರಫ್ತು ವಹಿವಾಟು ಹೆಚ್ಚಳ

7

ರಫ್ತು ವಹಿವಾಟು ಹೆಚ್ಚಳ

Published:
Updated:
ರಫ್ತು ವಹಿವಾಟು ಹೆಚ್ಚಳ

ನವದೆಹಲಿ : ಎಂಜಿನಿಯರಿಂಗ್‌, ಔಷಧಿ ಮತ್ತು ರಾಸಾಯನಿಕ ವಲಯಗಳ ಉತ್ತಮ ಕೊಡುಗೆಯ ಕಾರಣಕ್ಕೆ ಏಪ್ರಿಲ್‌ ತಿಂಗಳಲ್ಲಿ ರಫ್ತು ವಹಿವಾಟು ಶೇ 5.17ರಷ್ಟು ಏರಿಕೆ ಕಂಡಿದೆ.

₹ 1.73 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ನಡೆದಿದ್ದರೆ, ₹  2.65 ಲಕ್ಷ ಕೋಟಿಗಳಷ್ಟು ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆಮದು ಪ್ರಮಾಣವು 2017ರ ಇದೇ ಅವಧಿಯಲ್ಲಿನ ವಹಿವಾಟಿಗೆ ಹೋಲಿಸಿದರೆ ಶೇ 4.6ರಷ್ಟು ಹೆಚ್ಚಳವಾಗಿದೆ.

ರಫ್ತು ಮತ್ತು ಆಮದು (ವ್ಯಾಪಾರ ಕೊರತೆ) ಅಂತರವು  ₹ 91,790 ಕೋಟಿಗಳಷ್ಟಾಗಿದೆ. 2017ರ ಏಪ್ರಿಲ್‌ನಲ್ಲಿ ಇದು ₹ 88,708 ಕೋಟಿಗಳಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೈಲ ಆಮದು ಪ್ರಮಾಣವು ಶೇ 41ರಷ್ಟು ಹೆಚ್ಚಳವಾಗಿದೆ. ಇದರ ಒಟ್ಟಾರೆ ಮೊತ್ತ ₹ 69,680 ಕೋಟಿಗಳಷ್ಟಿದೆ. ಚಿನ್ನದ ಆಮದು ಶೇ 33 ರಷ್ಟು ಕಡಿಮೆಯಾಗಿದೆ. ಇದರ ಮೊತ್ತ ₹ 17,286 ಕೋಟಿಗಳಷ್ಟಿದೆ.

ಮಾರ್ಚ್‌ ತಿಂಗಳಲ್ಲಿನ ಸೇವಾ ರಫ್ತು ಪ್ರಮಾಣವು (₹ 1.12 ಲಕ್ಷ ಕೋಟಿ) ಶೇ 7.16 ರಷ್ಟು ಏರಿಕೆ ಕಂಡಿದೆ. ಸೇವೆಗಳ ಆಮದು ( ₹ 68,340 ಕೋಟಿ) ಶೇ 1.35ರಷ್ಟು ಹೆಚ್ಚಳ ದಾಖಲಿಸಿದೆ. ಸೇವಾ ವಲಯದ ವ್ಯಾಪಾರದಲ್ಲಿ  ₹ 43,550 ಕೋಟಿಗಳ ಉಳಿತಾಯ ಕಂಡು ಬಂದಿದೆ.

*

ರಫ್ತು ವಹಿವಾಟು ಉತ್ತೇಜನಕಾರಿಯಾಗಿಲ್ಲ. ಎಂಎಸ್‌ಎಂಇ ವಲಯದ ವಹಿವಾಟು ನಿರಾಶಾದಾಯಕವಾಗಿದೆ.

-ಗಣೇಶ್‌ ಕುಮಾರ್‌ ಗುಪ್ತ, ರಫ್ತು ವಹಿವಾಟುದಾರರ ಒಕ್ಕೂಟದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry