ಮಂಗಳವಾರ, ಮಾರ್ಚ್ 9, 2021
23 °C
ಎರಡು ಗೋಲು ಗಳಿಸಿದ ನಿಶು ಕುಮಾರ್; ಡೇನಿಯಲ್‌, ಚೆಟ್ರಿ ಮಿಂಚು

ಅದೃಷ್ಟದಾಟದಲ್ಲಿ ಬಿಎಫ್‌ಸಿಗೆ ‘ಜಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದೃಷ್ಟದಾಟದಲ್ಲಿ ಬಿಎಫ್‌ಸಿಗೆ ‘ಜಯ’

ಢಾಕಾ (ಪಿಟಿಐ): ಅದೃಷ್ಟದ ಆಟದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ‘ಜಯ’ ಗಳಿಸಿತು. ಈ ಮೂಲಕ ಎಎಫ್‌ಸಿ ಕಪ್‌ ಫುಟ್‌ಬಾಲ್ ಟೂರ್ನಿಯ ನಾಕೌಟ್ ಹಂತ ಪ್ರವೇಶಿ ಸಿತು. ಬುಧವಾರ ನಡೆದ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ ಬಿಎಫ್‌ಸಿ ಭರ್ಜರಿ ಗೆಲುವು ಗಳಿಸಿತು.

ಇದೇ ಸಂದರ್ಭದಲ್ಲಿ ಗುವಾಹಟಿ ಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಮಾಲ್ಡಿವ್ಸ್‌ನ ನ್ಯೂ ರೇಡಿಯಂಟ್ ಎದುರು ಐಜ್ವಾಲ್‌ ಎಫ್‌ಸಿ ತಂಡ ಅಚ್ಚರಿಯ ಜಯ ಗಳಿಸಿತು. ಹೀಗಾಗಿ ಬಿಎಫ್‌ಸಿಯ ಭಾಗ್ಯದ ಬಾಗಿಲು ತೆರೆಯಿತು. ಸುನಿಲ್ ಚೆಟ್ರಿ ಬಳಗವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಇಲ್ಲಿನ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ‘ಇ’ ಗುಂಪಿನ ಆರನೇ ಸುತ್ತಿನ ಪಂದ್ಯದಲ್ಲಿ ಬಿಎಫ್‌ಸಿ ಆತಿಥೇಯ ಅಬ ಹಾನಿ ಢಾಕಾ ಲಿಮಿಟೆಡ್ ತಂಡವನ್ನು 4–0 ಗೋಲುಗಳ ಅಂತರದಿಂದ ಮಣಿಸಿತು.

ಐಜ್ವಾಲ್ ಜಯಭೇರಿ: ಗುವಾಹಟಿಯಲ್ಲಿ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಐಜ್ವಾಲ್‌ 2–1ರಿಂದ ರೇಡಿಯಂಟ್‌ ತಂಡವನ್ನು ಮಣಿಸಿತು. ಐದನೇ ಸುತ್ತಿನ ಪಂದ್ಯಗಳ ಮುಕ್ತಾಯಕ್ಕೆ ಬಿಎಫ್‌ಸಿ ಮತ್ತು ರೇಡಿಯಂಟ್‌ ತಲಾ 12 ಪಾಯಿಂಟ್ ಗಳಿಸಿದ್ದವು. ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಗೋಲು ಗಳಿಕೆಯಲ್ಲಿ ಬಿಎಫ್‌ಸಿಗಿಂತ ರೇಡಿಯಂಟ್‌ ಮುಂದಿತ್ತು.

ಆದ್ದರಿಂದ ಪಾಯಿಂಟ್ ಪಟ್ಟಿಯಲ್ಲಿ ರೇಡಿಯಂಟ್ ಅಗ್ರಸ್ಥಾನದಲ್ಲಿತ್ತು. ಹೀಗಾ ಗಿ ಬಿಎಫ್‌ಸಿ ನಾಕೌಟ್ ಹಂತಕ್ಕೆ ಪ್ರವೇಶಿಸಬೇಕಾದರೆ ಅಬಹಾನಿ ವಿರುದ್ಧ ಗೆಲ್ಲಬೇಕಾಗಿತ್ತು ಮತ್ತು ಗುವಾಹಟಿ ಪಂದ್ಯದಲ್ಲಿ ರೇಡಿಯಂಟ್ ಸೋಲಬೇಕಿತ್ತು.

ಮಿಂಚಿದ ಸೆಗೋವಿಯಾ, ನಿಶುಕುಮಾರ್‌: ಬುಧವಾರ ಅಬಹಾನಿ ತಂಡದ ವಿರುದ್ಧ ಬಿಎಫ್‌ಸಿ ಪಾರಮ್ಯ ಮೆರೆಯಿತು. ಪಂದ್ಯದ ಆರಂಭದಿಂದಲೇ ಆಕ್ರಮಣಕ್ಕೆ ಒತ್ತು ನೀಡಿದ ತಂಡ ಪ್ರಥ ಮಾರ್ಧದಲ್ಲಿ ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿತು. 13ನೇ ನಿಮಿಷ ದಲ್ಲಿ ಡೇನಿಯಲ್ ಸೆಗೋವಿಯಾ ಅವರು ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಗಾಯಗೊಂಡಿರುವ ಬೊಯಿಥಾಂಗ್ ಹಾಕಿಪ್‌ ಅವರ ಬದ ಲಿಗೆ ಕಣಕ್ಕೆ ಇಳಿದ ನಿಶುಕುಮಾರ್ 16ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿದರು.

ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಇನ್ನಷ್ಟು ಉತ್ತಮ ಆಟ ಆಡಿತು. ನಿಶು ಕುಮಾರ್‌ 58ನೇ ನಿಮಿಷದಲ್ಲಿ ಮಿಂಚಿದರು.

ಮೋಹಕ ಗೋಲು ಗಳಿಸಿದ ಅವರು ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು. ನಂತರದ ಎರಡು ನಿಮಿಷಗಳಲ್ಲಿ ನಾಯಕ ಸುನಿಲ್ ಚೆಟ್ರಿ ಕೂಡ ಗೋಲು ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.