ಮಲೇಷ್ಯಾದ ನಾಯಕ ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನ

7

ಮಲೇಷ್ಯಾದ ನಾಯಕ ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನ

Published:
Updated:
ಮಲೇಷ್ಯಾದ ನಾಯಕ ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನ

ಕೌಲಾಲಂಪುರ: ಸುಧಾರಣಾವಾದಿ ಹಾಗೂ ವಿರೋಧ ಪಕ್ಷದ ನಾಯಕ ಅನ್ವರ್‌ ಇಬ್ರಾಹಿಂ ಅವರಿಗೆ ಕ್ಷಮಾದಾನ ದೊರಕಿದ್ದು, ಅವರು ಬಂಧಮುಕ್ತವಾಗಿದ್ದಾರೆ. ಪ್ರಧಾನಿ ಹುದ್ದೆಗೇರಲಿರುವ ಅವರನ್ನು ಮೈತ್ರಿಕೂಟದ ನಾಯಕರು ಭರ್ಜರಿ ಸ್ವಾಗತ ನೀಡಿ ಮಾಡಿಕೊಂಡರು. ಮಲೇಷ್ಯಾದ ರಾಜಕಾರಣದಲ್ಲಿ ಈಗ ಹೊಸ ಬೆಳಕು ಮೂಡಿದಂತಾಗಿದೆ.

ರಾಜಕೀಯ ಕೈದಿಯಾಗಿದ್ದ ಅನ್ವರ್‌ ಇಬ್ರಾಹಿಂ ಅವರ ನೇತೃತ್ವದ ಮೈತ್ರಿಕೂಟವು ಇತ್ತೀಚೆಗೆ ದೇಶದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಅಚ್ಚರಿಯ ವಿಜಯ ಸಾಧಿಸಿದೆ. 70

ವರ್ಷದ ಅನ್ವರ್‌ ಅವರನ್ನು 2015ರಲ್ಲಿ ಅಸಹಜ ಲೈಂಗಿಕ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಜೈಲು ಶಿಕ್ಷೆಯು ಜೂನ್‌ 8ರಂದು ಮುಗಿಯುವುದಿತ್ತು. ಅಷ್ಟರೊಳಗೆ ಅವರಿಗೆ ರಾಜ ಕ್ಷಮಾದಾನ ನೀಡಿ, ಭಾವಿ ಪ್ರಧಾನಿಯನ್ನು ಬಂಧಮುಕ್ತಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry