ಶಿವಣ್ಣ ಬಿಟ್ಟು ಬಿಜೆಪಿ ಅಭ್ಯರ್ಥಿಗಳ ಠೇವಣಿ ನಾಶ

7

ಶಿವಣ್ಣ ಬಿಟ್ಟು ಬಿಜೆಪಿ ಅಭ್ಯರ್ಥಿಗಳ ಠೇವಣಿ ನಾಶ

Published:
Updated:
ಶಿವಣ್ಣ ಬಿಟ್ಟು ಬಿಜೆಪಿ ಅಭ್ಯರ್ಥಿಗಳ ಠೇವಣಿ ನಾಶ

ಮಂಡ್ಯ: ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದಗಾಲು ಎನ್‌.ಶಿವಣ್ಣ ಹೊರತುಪಡಿಸಿ ಮಿಕ್ಕೆಲ್ಲ ಬಿಜೆಪಿ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

ಚಲಾವಣೆಯಾದ ಮತಗಳಲ್ಲಿ 6/1ರಷ್ಟು ಮತ ಗಳಿಸಿದರೆ ಮಾತ್ರ ಅಭ್ಯರ್ಥಿಗಳ ಠೇವಣಿ ಉಳಿಯುತ್ತದೆ. ಮಂಡ್ಯ ಕ್ಷೇತ್ರದಲ್ಲಿ 1,65,180 ಮತಗಳು ಚಲಾವಣೆಯಾಗಿವೆ. ಇದರಲ್ಲಿ 27,365 ಮತ ಗಳಿಸಿದರೆ ಮಾತ್ರ ಆ ಅಭ್ಯರ್ಥಿಯ ಠೇವಣಿ ಉಳಿಯುತ್ತದೆ. ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ 32,064 ಮತ ಗಳಿಸಿದ್ದು ಠೇವಣಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ 10,564 ಮತಗಳಿಸಿದ್ದು ಠೇವಣಿ ಕಳೆದುಕೊಂಡಿದ್ದಾರೆ. ಕಣದಲ್ಲಿ ಇದ್ದ ಮಿಕ್ಕ 9 ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು 28,722 ಮತ ಪಡೆಯಬೇಕು. ಆದರೆ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು 9,819 ಮತ ಗಳಿಸಿದ್ದು ಠೇವಣಿ ಕಳೆದುಕೊಂಡಿದ್ದಾರೆ. ಉಳಿದ ಎಂಟೂ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಶ್ರೀರಂಗಟ್ಟಣ ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು 29,198 ಮತ ಗಳಿಸಬೇಕು. ಬಿಜೆಪಿಗೆ ಭರವಸೆಯಾಗಿದ್ದ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಅವರು 11,326 ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ಮದ್ದೂರು ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು 28,365 ಮತ ಪಡೆಯಬೇಕು. ಆದರೆ ಬಿಜೆಪಿ ಅಭ್ಯರ್ಥಿ ಸತೀಶ್‌ 5,154 ಮತಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು 28,298 ಮತ ಪಡೆಯಬೇಕು. ಬಿಜೆಪಿ ಅಭ್ಯರ್ಥಿ ಸುಂಡಹಳ್ಳಿ ಸೋಮಶೇಖರ್‌ 1,595 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ 16/1ರಷ್ಟು ಮತ ಗಳಿಸಿದರೆ ಠೇವಣಿ ಉಳಿಯುತ್ತದೆ. ಅದರಂತೆ 12,104 ಮತ ಗಳಿಸಿದರೆ ಮಾತ್ರ ಠೇವಣಿ ಉಳಿಸಿಕೊಳ್ಳಬಹುದು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸೋಮಶೇಖರ್‌ ಒಟ್ಟು 10,808 ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು 30,039 ಮತ ಪಡೆಯಬೇಕು. ಬಿಜೆಪಿ ಅಭ್ಯರ್ಥಿ ಪಾರ್ಥಸಾರಥಿ ಗೌಡ 1915 ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಠೇವಣಿ ಪಡೆಯಲು28,298 ಮತ ಪಡೆಯಬೇಕು. ಬಿಜೆಪಿ ಅಭ್ಯರ್ಥಿ ಸುಂಡಹಳ್ಳಿ ಸೋಮಶೇಖರ್‌ 1595 ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ಪಡೆದ ಮತಕ್ಕಿಂತ ನೋಟಾ ಹೆಚ್ಚು!

ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪಡೆದ ಮತಕ್ಕಿಂತಲೂ ನೋಟಾ ಮತಗಳೇ ಹೆಚ್ಚಾಗಿವೆ. ಮಂಡ್ಯ ಕ್ಷೇತ್ರದಲ್ಲಿ 1,008 ನೋಟಾ ಮತ ಚಲಾವಣೆಗೊಂಡಿವೆ. ಆದರೆ ಅಭ್ಯರ್ಥಿಗಳು ಅದಕ್ಕಿಂತ ಕಡಿಮೆ ಮತ ಗಳಿಸಿದ್ದಾರೆ. ಕಾವೇರಿ ಶ್ರೇಯಾ, ಕೆಪಿಜೆಪಿ ಅಭ್ಯರ್ಥಿ ಬಿ.ಎಸ್‌.ಶಿವಕುಮಾರ್‌, ಪಕ್ಷೇತರ ಅಭ್ಯರ್ಥಿಗಳಾದ ಎಂ.ಬಿ.ನಾಗಣ್ಣಗೌಡ. ರಾಜೇಶ್‌ ಮುಂತಾದವರು ನೋಟಾ ಮತಗಳಿಗಿಂತಲೂ ಕಡಿಮೆ ಮತ ಪಡೆದಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ 647 ನೋಟ ಮತ ಚಲಾವಣೆಯಾಗಿವೆ. ಶ್ರೀರಂಗಪಟ್ಟಣದಲ್ಲಿ 946,   ಮೇಲುಕೋಟೆ ಕ್ಷೇತ್ರದಲ್ಲಿ 979, ಕೆ.ಆರ್‌.ಪೇಟೆಯಲ್ಲಿ 1,090, ಮಳವಳ್ಳಿಯಲ್ಲಿ ಅತಿ ಹೆಚ್ಚು 1,471 ನೋಟಾ ಮತ ಚಲಾವಣೆಯಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry