ಜೆಡಿಎಸ್- ಕಾಂಗ್ರೆಸ್ ಅಪವಿತ್ರ ಮೈತ್ರಿ ರಾಜ್ಯದ ಜನ ಒಪ್ಪಲ್ಲ: ಬಿಎಸ್‌ವೈ

7
ಸಬ್ ಕಾ ಸಾಥ್ ಸಬ್ ಕಾ ವಿಕಾಸ್

ಜೆಡಿಎಸ್- ಕಾಂಗ್ರೆಸ್ ಅಪವಿತ್ರ ಮೈತ್ರಿ ರಾಜ್ಯದ ಜನ ಒಪ್ಪಲ್ಲ: ಬಿಎಸ್‌ವೈ

Published:
Updated:
ಜೆಡಿಎಸ್- ಕಾಂಗ್ರೆಸ್ ಅಪವಿತ್ರ ಮೈತ್ರಿ ರಾಜ್ಯದ ಜನ ಒಪ್ಪಲ್ಲ: ಬಿಎಸ್‌ವೈ

ತುಮಕೂರು: ರಾಜ್ಯದ ಜನರ ಅಶೀರ್ವಾದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಪ್ರಯತ್ನ ಯಶಸ್ವಿಯಾಗಲ್ಲ. ರಾಜ್ಯದ ಜನರು ಇದನ್ನು ಒಪ್ಪಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗುರುವಾರ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.

ಸ್ವಾಮೀಜಿಗಳ ಅಶೀರ್ವಾದಿಂದ ಪಕ್ಷ ಹೆಚ್ಚಿನ ಸ್ಥಾನ ಗಳಿಸಿದೆ. ಮುಖ್ಯಮಂತ್ರಿಯಾದ ಬಳಿಕ ಸ್ವಾಮೀಜಿ ಅಶೀರ್ವಾದ ಪಡೆದಿದ್ದೇನೆ ಎಂದರು.

12 ದಿನದಲ್ಲಿ ಅಧಿವೇಶನ ಕರೆಯುತ್ತೇನೆ. ಒಂದೆರಡು ದಿನದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮತ್ತು ಸಹಕಾರ ಬ್ಯಾಂಕಿನಲ್ಲಿ ಪಡೆದಿರುವ ಸಾಲದಲ್ಲಿ ₹ 1 ಲಕ್ಷ ಸಾಲ ಮನ್ನಾ ಮಾಡಲಾಗುವುದು. ಇದೇ ದಿನ ಈ ಪ್ರ್ರಕ್ರಿಯೆ ನಡೆಯಬೇಕಿತ್ತು. ಅ಼ಧಿಕಾರಿಗಳು ಅಂಕಿ ಅಂಶ ವಿವರ ಕ್ರೋಢೀಕರಿಸಿ ಕೊಡಬೇಕಿರುವುದರಿಂದ ಒಂದೆರಡು ದಿನ ತಡವಾಗಲಿದೆ ಎಂದು ಹೇಳಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಬೇಕು. ಕರ್ನಾಟಕವನ್ನು ಮಾದರಿ ರಾಜ್ಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ರಾಜ್ಯದ ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಉತ್ತಮ ಆಡಳಿತ ನೀಡುತ್ತೇನೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry