ವಾಟಾಳ್ ಮಾದರಿಯಾಗಲಿ

7

ವಾಟಾಳ್ ಮಾದರಿಯಾಗಲಿ

Published:
Updated:

ರಾಜ್ಯದಲ್ಲಿ ರಾಜಕೀಯವಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗೂ ಮೊದಲು ‘ಯಾರ ಜತೆಗೂ ಮೈತ್ರಿ ಮಾಡುವುದಿಲ್ಲ, ನಾವೇ ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಆಗ ಕೆಲವರು, ‘ಜೆಡಿಎಸ್‌ ಅವಕಾಶವಾದಿ ಪಕ್ಷ, ಕುಮಾರಸ್ವಾಮಿ ಅವರು ತಮ್ಮದೇ ತತ್ವ ಸಿದ್ಧಾಂತಗಳ ವಿರುದ್ಧ ಹೋಗುತ್ತಾರೆ’ ಎಂದು ಟೀಕಿಸಿದ್ದೂ ಇದೆ. ಈಗ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಜತೆ ಮೈತ್ರಿಗೆ ಮುಂದಾಗಿರುವುದನ್ನು ನೋಡಿದರೆ ಅವರ ಆರೋಪದಲ್ಲಿ ಹುರುಳಿದೆ ಎಂದೆನಿಸುತ್ತದೆ.

ಕುಮಾರಸ್ವಾಮಿಯವರು ಒಮ್ಮೆ ವಾಟಾಳ್‌ ನಾಗರಾಜ್‌ ಅವರ ರಾಜಕೀಯ ಜೀವನದತ್ತ ದೃಷ್ಟಿ ಹಾಯಿಸಬೇಕು. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಭಾರಿ ಅಂತರದಿಂದ ಸೋತಿದ್ದಾರೆ ಎಂಬ ಸುದ್ದಿ ತಿಳಿದು ಬೇಸರವಾಯಿತು. ಕನ್ನಡ ಪರ ಚಳವಳಿಯ ಮೂಲಕ ನಾಯಕರಾಗಿ ರೂಪುಗೊಂಡ ವಾಟಾಳ್‌, ಕರ್ನಾಟಕದ ಚುನಾವಣಾ ರಾಜಕೀಯವನ್ನು ಹತ್ತಿರದಿಂದ ಕಂಡವರು. ಮನಸ್ಸು ಮಾಡಿದ್ದರೆ ಯಾವುದಾದರೂ ಪಕ್ಷ ಸೇರಿ, ಮಂತ್ರಿಯೂ ಆಗಬಹುದಿತ್ತು. ಆದರೆ ತತ್ವ– ಸಿದ್ಧಾಂತವನ್ನು ಬಿಟ್ಟುಕೊಡದೆ, ತಮ್ಮ ಹೋರಾಟಕ್ಕೆ ಬದ್ಧರಾಗಿ ಸ್ವಂತ ಪಕ್ಷ ಕಟ್ಟಿ ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್‌ನವರೂ ಹೊಂದಾಣಿಕೆಯ ರಾಜಕಾರಣವನ್ನು ಬಿಟ್ಟು, ವಾಟಾಳ್‌ ಅವರಂತೆ ಹೋರಾಟ ಮಾಡಿ, ರಾಜ್ಯದ ಜನರ ಮನಸ್ಸನ್ನು ಗೆದ್ದು, ಸ್ವಂತ ಶಕ್ತಿಯಿಂದಲೇ ಸರ್ಕಾರ ರಚಿಸಬಹುದಿತ್ತಲ್ಲವೇ?

ವಿಜಯ್ ಕಲ್ಯಾಣ ರಾಮನ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry