ಇಡೀ ದಿನ ಶಾಂಗ್ರಿಲಾದಲ್ಲೇ ಕಳೆದ ಜೆಡಿಎಸ್ ಶಾಸಕರು

7

ಇಡೀ ದಿನ ಶಾಂಗ್ರಿಲಾದಲ್ಲೇ ಕಳೆದ ಜೆಡಿಎಸ್ ಶಾಸಕರು

Published:
Updated:

ಬೆಂಗಳೂರು: ಬಿಜೆಪಿ ಪಾಳೆಯಕ್ಕೆ ಜಿಗಿಯದಂತೆ ಜೆಡಿಎಸ್‌ ತನ್ನ ಶಾಸಕರನ್ನು ರಕ್ಷಿಸಿಟ್ಟುಕೊಳ್ಳಲು ಎರಡನೇ ದಿನವೂ ನಗರದ ಪಂಚತಾರಾ ಹೋಟೆಲ್‌ ಶಾಂಗ್ರಿಲಾದಲ್ಲೇ ಇರಿಸಿಕೊಂಡಿತ್ತು.

ಎಲ್ಲ ಶಾಸಕರ ಚಲನವಲನಗಳ ಮೇಲೆ ವರಿಷ್ಠರು ನಿಗಾ ಇರಿಸಿದ್ದರು. ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಲು ಬಸ್‌ನಲ್ಲಿ ಒಟ್ಟಿಗೆ ತೆರಳಿದ್ದರು.

ಪ್ರತಿಭಟನೆ ಮುಗಿದ ಬಳಿಕ ಶಾಸಕರನ್ನೂ ನೇರವಾಗಿ ಶಾಂಗ್ರಿಲಾ ಹೊಟೇಲ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಕೊಚ್ಚಿಯ ರೆಸಾರ್ಟ್‌ಗೆ ತೆರ

ಳಲು ಸಿದ್ಧವಾಗಿರುವಂತೆ ಕುಮಾರಸ್ವಾಮಿ ಸೂಚಿಸಿದರು.

ಶಾಸಕರನ್ನು ಗಾಂಧಿ ಪ್ರತಿಮೆ ಬಳಿ ಕರೆದೊಯ್ಯುವ ಮುನ್ನ ಮಾತನಾಡಿದ ಕುಮಾರಸ್ವಾಮಿ, ‘ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ದೇಶದ ರಕ್ಷಣೆಗಾಗಿ ಕೈ ಜೋಡಿಸಲು ಮನವಿ ಮಾಡಿದ್ದೇನೆ.  ಎಂದರು.

ಅಧಿಕಾರ ದುರ್ಬಳಕೆ: ‘ನಮ್ಮ ಶಾಸಕರನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ವಿಜಯನಗರದ ಕಾಂಗ್ರೆಸ್‌ ಆನಂದ್‌ ಸಿಂಗ್‌ ಅವರಿಗೆ ಬೆದರಿಕೆ ಒಡ್ಡಲು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಬಿಜೆಪಿ ಜೊತೆ ಕೈಜೋಡಿಸದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದಾಗಿ ಆನಂದ್‌ ಸಿಂಗ್‌ ಕಾಂಗ್ರೆಸ್‌ನ ನಾಯಕರ ಜೊತೆ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry