ಧಾರಾಕಾರ ಮಳೆ: ಸಿಡಿಲಿಗೆ ಯುವಕ ಬಲಿ

7

ಧಾರಾಕಾರ ಮಳೆ: ಸಿಡಿಲಿಗೆ ಯುವಕ ಬಲಿ

Published:
Updated:
ಧಾರಾಕಾರ ಮಳೆ: ಸಿಡಿಲಿಗೆ ಯುವಕ ಬಲಿ

ಹುಬ್ಬಳ್ಳಿ: ಹುಬ್ಬಳ್ಳಿ ಸೇರಿ ಗದಗ– ಬೆಟಗೇರಿ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಯ ವಿವಿಧೆಡೆ ಗುರುವಾರ ಮಳೆಯಾಗಿದೆ.

ಗದಗ ಜಿಲ್ಲೆಯ ರೋಣದಲ್ಲಿ ಕುರಿ ಕಾಯುತ್ತಿದ್ದ ಸೋಮಶೇಖರ ಈರಪ್ಪ ಕೊಳ್ಳಿ (23) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.

ಗದಗ ನಗರದಲ್ಲಿರುವ ಕೆಲವು ಡಬ್ಬಿ ಅಂಗಡಿಗಳ ತಗಡಿನ ಶೀಟ್‌ ಹಾರಿಹೋಗಿವೆ.

ಜಿಲ್ಲೆಯಲ್ಲಿ 13 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಜತೆಗೆ 8ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಗೋರಚಿಂಚೋಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಬಡಿದ ಸಿಡಿಲಿಗೆ ಹಸು ಬಲಿಯಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಹಾಗೂ ಕವಿತಾಳದಲ್ಲೂ ಭಾರಿ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry