ಸೈಕಲ್ ಮೇಲೆ ನವ ಜೋಡಿ!

7

ಸೈಕಲ್ ಮೇಲೆ ನವ ಜೋಡಿ!

Published:
Updated:
ಸೈಕಲ್ ಮೇಲೆ ನವ ಜೋಡಿ!

ಪಟ್ನಾ: ಮೇ 12ರಂದು ವೈವಾಹಿಕ ಬದುಕಿಗೆ ಅಡಿಯಿಟ್ಟ ಲಾಲು ಪ್ರಸಾದ್ ಅವರ ಪುತ್ರ ತೇಜ್ ಪ್ರತಾಪ್ ಅವರು ಪತ್ನಿ ಐಶ್ವರ್ಯಾ ರಾಯ್ ಅವರನ್ನು ಸೈಕಲ್ ಮೇಲೆ ಕೂಡಿಸಿಕೊಂಡು ನಗರವನ್ನು ಸುತ್ತಿದ ಚಿತ್ರ ವೈರಲ್ ಆಗಿದೆ.

ಮದುವೆಗೆ ಸಂಬಂಧಿಸಿದ ಹಲವು ವಿಡಿಯೊ ಹಾಗೂ ಚಿತ್ರಗಳನ್ನು ತೇಜ್ ಪ್ರತಾಪ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಸೈಕಲ್‌ನಲ್ಲಿ ನವಜೋಡಿ ಇರುವ ಚಿತ್ರವನ್ನು ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಜನರು ಹಂಚಿಕೊಂಡಿದ್ದಾರೆ.

ತೇಜ್, ಬಿಳಿ ಬಣ್ಣದ ಕುರ್ತಾ, ಪೈಜಾಮ ಧರಿಸಿದ್ದಾರೆ. ಐಶ್ವರ್ಯಾ ಅವರು ಕೇಸರಿ ಬಣ್ಣದ ಸೀರೆ ಉಟ್ಟಿದ್ದಾರೆ. ಇಬ್ಬರೂ ಸೈಕಲ್‌ ಹತ್ತಿ ಜಾಲಿ ರೈಡ್ ಹೋಗುತ್ತಿರುವ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೆಚ್ಚಿಕೊಂಡಿದ್ದಾರೆ. 

ಐಶ್ವರ್ಯಾ, ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್‌ ರಾಯ್‌ ಮೊಮ್ಮಗಳು ಹಾಗೂ ಮಾಜಿ ಸಚಿವ ಚಂದ್ರಿಕಾ ರಾಯ್ ಮಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry