ಫೈನಲ್‌ಗೆ ಭಾರತ ಮಹಿಳೆಯರ ಬಳಗ

7

ಫೈನಲ್‌ಗೆ ಭಾರತ ಮಹಿಳೆಯರ ಬಳಗ

Published:
Updated:
ಫೈನಲ್‌ಗೆ ಭಾರತ ಮಹಿಳೆಯರ ಬಳಗ

ಡಾಂಗೆ, ಕೊರಿಯ (ಪಿಟಿಐ): ಸತತ ಮೂರನೇ ಜಯ ದಾಖಲಿಸಿದ ಭಾರತ ತಂಡದವರು ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿದರು.

ಗುರುವಾರ ನಡೆದ ಗುಂಪು ಹಂತದ  ಮೂರನೇ ಪಂದ್ಯದಲ್ಲಿ ಭಾರತ 3–2ರಿಂದ ಮಲೇಷ್ಯಾವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಜಪಾನ್‌ ಎದುರು 4–1ರಿಂದ ಗೆದ್ದಿದ್ದ ತಂಡ ಬುಧವಾರ ಚೀನಾವನ್ನು 3–1ರಿಂದ ಸೋಲಿಸಿತ್ತು.

ಚೀನಾ ಎದುರು ಎರಡು ಗೋಲು ಗಳಿಸಿದ್ದ ವಂದನಾ ಕಠಾರಿಯಾ ಗುರುವಾರವೂ ಸೊಗಸಾದ ಆಟವಾ ಡಿದರು. ಅವರು ಒಂದು ಗೋಲು ಗಳಿಸಿದರೆ ಗುರುಜೀತ್ ಕೌರ್‌ ಮತ್ತು ಲಾಲ್‌ರೆಮ್ಸಿಯಾಮಿ ಕೂಡ ಒಂದೊಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಶನಿವಾರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆತಿಥೇಯರನ್ನು ಎದುರಿಸಲಿದ್ದು ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಗುರುವಾರದ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಗೆ ಸಾಕಷ್ಟು ಪೆನಾಲ್ಟಿ ಕಾರ್ನರ್‌ ಅವ ಕಾಶಗಳು ಲಭಿಸಿದ್ದವು. ಆದರೆ ಅದರ ಪ್ರಯೋಜನ ಪಡೆದುಕೊಳ್ಳಲು ಆಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಗುರುಜೀತ್ ಕೌರ್ ಮೂಲಕ ಭಾರತ ಖಾತೆ ತೆರೆಯಿತು.

ಇದು ಎದುರಾಳಿ ತಂಡದ ಒತ್ತ ಡಕ್ಕೆ ಕಾರಣವಾಯಿತು. ಆದರೂ ಚೇತರಿಸಿ ಕೊಂಡ ಮಲೇಷ್ಯಾ ಪ್ರಬಲ ಆಕ್ರಮಣ ನಡೆಸಿತು. ಆದರೆ ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರು ಆ ತಂಡದ ನಿರೀಕ್ಷೆ ಹುಸಿಗೊಳಿಸಿದರು.

17ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗುರುಜೀತ್ ಸದುಪಯೋಗ ಮಾಡಿ ಕೊಂಡರು.

ಗೋಲುಪೆಟ್ಟಿಗೆಯ ಬಲ ಮೂಲೆಯಿಂದ ಚೆಂಡು ಶರವೇಗದಲ್ಲಿ ನುಗ್ಗಿದಾಗ ಮಲೇಷ್ಯಾದ ಗೋಲ್ ಕೀಪರ್‌ ಮೂಕಪ್ರೇಕ್ಷಕಿಯಾದರು.

ನಂತರ ಭಾರತದ ಆಕ್ರಮಣ ಇನ್ನಷ್ಟು ಬಲ ಪಡೆದುಕೊಂಡಿತು. ಗೋಲ್‌ಕೀ‍ಪರ್‌ ಎದುರಾಳಿಗಳ ದಾಳಿ ಯನ್ನು ತಡೆಯುವಲ್ಲಿ ಯಶಸ್ವಿಯಾದರು. ಮಧ್ಯಂತರ ಅವಧಿಯ ನಂತರದ ಮೂರನೇ ನಿಮಿಷದಲ್ಲಿ ವಂದನಾ ಕಠಾ ರಿಯಾ ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು.

36ನೇ ನಿಮಿಷದಲ್ಲಿ ನೂರಾನಿ ಮೂಲಕ ಮಲೇಷ್ಯಾ ಗೋಲು ಗಳಿಸಿ ತಿರುಗೇಟು ನೀಡಿತು. ನಂತರ ಭಾರತಕ್ಕೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. 40ನೇ ನಿಮಿಷದಲ್ಲಿ ನಾಯಕಿ ಸುನಿತಾ ಲಾಕ್ರಾ ಮತ್ತು ಲಾಲ್‌ರೆಮ್ಸಿಯಾಮಿ ಅವರ ಹೊಂದಾಣಿಕೆಯ ಆಟದಿಂದ ಭಾರತದ ಮುನ್ನಡೆ 3–1ಕ್ಕೆ ಏರಿತು.

ಸುನಿತಾ ಅವರು ದೂರಿಂದ ನೀಡಿದ ಪಾಸ್‌ ಅನ್ನು ನಿಯಂತ್ರಿಸಿದ ಯುವ ಆಟಗಾರ್ತಿ ಲಾಲ್‌ರೆಮ್ಸಿಯಾಮಿ ನಿಖರವಾಗಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.

48ನೇ ನಿಮಿಷದಲ್ಲಿ ಮಲೇಷ್ಯಾದ ಹನೀಸ್‌ ಓನ್‌ ಗೋಲು ಗಳಿಸಿ ಸಮಬಲ ಸಾಧಿಸುವ ಭರವಸೆ ಮೂಡಿಸಿದರು. ಆದರೆ ಅಂತಿಮ ನಿಮಿಷಗಳಲ್ಲಿ ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರು ಅಪ್ರತಿಮ ಆಟ ಆಡಿ ಜಯ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry