ವೋವ್‌ ಏರ್‌: ಅಮೆರಿಕೆಗೆ ಡಿಸೆಂಬರ್‌ನಲ್ಲಿ ಸೇವೆ ಆರಂಭ

7

ವೋವ್‌ ಏರ್‌: ಅಮೆರಿಕೆಗೆ ಡಿಸೆಂಬರ್‌ನಲ್ಲಿ ಸೇವೆ ಆರಂಭ

Published:
Updated:
ವೋವ್‌ ಏರ್‌: ಅಮೆರಿಕೆಗೆ ಡಿಸೆಂಬರ್‌ನಲ್ಲಿ ಸೇವೆ ಆರಂಭ

ನವದೆಹಲಿ : ಐಸ್‌ಲ್ಯಾಂಡ್‌ನ ಅಗ್ಗದ ವಿಮಾನ ಯಾನ ಸಂಸ್ಥೆ ವೋವ್‌ ಏರ್‌, ದೆಹಲಿಯಿಂದ ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ಡಿಸೆಂಬರ್‌ನಿಂದ ವಿಮಾನ ಸೇವೆ ಆರಂಭಿಸಲಿದೆ.

ಐಸ್‌ಲ್ಯಾಂಡ್‌ನ ರಾಜಧಾನಿ ಕೆಫ್ಲವಿಕ್‌ಗೆ ಆರಂಭಿಕ ಕೊಡುಗೆಯಾಗಿ ಮೂಲ ಪ್ರಯಾಣ ದರವನ್ನು ₹13,499ಕ್ಕೆ ನಿಗದಿ ಮಾಡಿದೆ. ಇದು ಎಲ್ಲ ತೆರಿಗೆಗಳನ್ನು ಒಳಗೊಂಡಿರಲಿದ್ದು, ಊಟ ಮತ್ತು ಚೆಕ್‌ ಇನ್‌ ಬ್ಯಾಗೇಜ್‌ಗಳ ವೆಚ್ಚ ಪ್ರತ್ಯೇಕವಾಗಿರುತ್ತದೆ.

‘ನಮ್ಮ ವಿಮಾನ ಸೇವೆಯಿಂದ ಭಾರತದ ಪ್ರವಾಸಿಗರು ಕೆಫ್ಲವಿಕ್‌ನಿಂದ ಉತ್ತರ ಅಮೆರಿಕ ಮತ್ತು ಯುರೋಪ್‌ನ ವಿವಿಧ ದೇಶಗಳಿಗೆ ಪ್ರಯಾಣ ಕೈಗೊಳ್ಳುವುದು ಸುಲಭವಾಗಲಿದೆ. ಸಂಸ್ಥೆಯು  ಯುರೋಪ್‌ ಮತ್ತು ಉತ್ತರ ಅಮೆರಿಕದ 39 ನಗರಗಳಿಗೆ ಸಂಪರ್ಕ ಕಲ್ಪಿಸಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್‌. ಮೊಗೆನ್ಸೆನ್‌ ಹೇಳಿದ್ದಾರೆ.

‘ವೋವ್‌ ಏರ್‌ನ, ‘ಏರ್‌ಬಸ್‌ ಎ330 ನಿಯೊ’ ವಿಮಾನಗಳು ವಾರದಲ್ಲಿ ಐದು ದಿನ ಸೇವೆ ಒದಗಿಸಲಿವೆ. ಆನಂತರ ಇದನ್ನು ವಾರದ ಏಳು ದಿನಗಳಿಗೂ ವಿಸ್ತರಿಸಲಾಗುವುದು. ಭಾರತದಲ್ಲಿನ ಇತರ ನಗರಗಳಿಗೂ  ಕ್ರಮೇಣ ಸಂಪರ್ಕ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry