ರಾಷ್ಟ್ರೀಯ ಚೊಚ್ಚಲ ಪ್ಯಾರಾ ಕ್ರೀಡಾಕೂಟ ಬೆಂಗಳೂರಿನಲ್ಲಿ

7

ರಾಷ್ಟ್ರೀಯ ಚೊಚ್ಚಲ ಪ್ಯಾರಾ ಕ್ರೀಡಾಕೂಟ ಬೆಂಗಳೂರಿನಲ್ಲಿ

Published:
Updated:

ನವದೆಹಲಿ (ಪಿಟಿಐ): ಖೇಲೊ ಇಂಡಿಯಾ ಯೋಜನೆಯಡಿ ರಾಷ್ಟ್ರೀಯ ಚೊಚ್ಚಲ ಪ್ಯಾರಾ ಕ್ರೀಡಾಕೂಟ ಜೂನ್‌ 28ರಿಂದ ಮತ್ತು ಜುಲೈ

ಏಳರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಕೂಟದ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಕೇಂದ್ರ ಕ್ರೀಡಾ ಇಲಾಖೆ ಗುರುವಾರ ಬಿಡುಗಡೆ ಮಾಡಿದ್ದು ಪ್ಯಾರಾಲಿಂಪಿಕ್‌ ಸಮಿತಿಗೆ ಕೂಟವನ್ನು ಆಯೋಜಿಸುವ ಹೊಣೆ ಹೊರಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 16ರಿಂದ 40 ವರ್ಷದ ವರೆಗಿನ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಚೆಸ್‌, ಪವರ್ ಲಿಫ್ಟಿಂಗ್‌, ಶೂಟಿಂಗ್‌, ಈಜು, ಟೇಬಲ್ ಟೆನಿಸ್‌, ವ್ಹೀಲ್‌ ಚೇರ್‌ ಬ್ಯಾಸ್ಕೆಟ್‌ಬಾಲ್‌, ವ್ಹೀಲ್ ಚೇರ್ ಫೆನ್ಸಿಂಗ್‌, ಅಂಧರ ಜೂಡೊ ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪುರುಷರ ವಿಭಾಗದಲ್ಲಿ 220, ಮಹಿಳೆಯರ ವಿಭಾಗದಲ್ಲಿ 180 ಮತ್ತು ಮಿಶ್ರ ವಿಭಾಗದಲ್ಲಿ 16 ಪದಕಗಳಿಗಾಗಿ ಸ್ಪರ್ಧೆ ಇರುತ್ತದೆ. ಕಂಠೀರವ ಕ್ರೀಡಾಂಗಣ, ಸಾಯಿ ಕೇಂದ್ರ ಮತ್ತು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಆವರಣದಲ್ಲಿ ಕೂಟ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry