ಸನ್‌ರೈಸರ್ಸ್‌ ವಿರುದ್ಧದ ಪಂದ್ಯ: ರಾಯಲ್‌ ಚಾಲೆಂಜರ್ಸ್‌ಗೆ ಜಯ

7

ಸನ್‌ರೈಸರ್ಸ್‌ ವಿರುದ್ಧದ ಪಂದ್ಯ: ರಾಯಲ್‌ ಚಾಲೆಂಜರ್ಸ್‌ಗೆ ಜಯ

Published:
Updated:
ಸನ್‌ರೈಸರ್ಸ್‌ ವಿರುದ್ಧದ ಪಂದ್ಯ: ರಾಯಲ್‌ ಚಾಲೆಂಜರ್ಸ್‌ಗೆ ಜಯ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ 14 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಯು 218 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ತಂಡವು 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಈ ಬಾರಿಯ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ಶ್ರೇಷ್ಠ ಬೌಲಿಂಗ್ ವಿಭಾಗ ಇರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು

ಗುರುವಾರ  ಎಬಿ ಡಿವಿಲಿಯರ್ಸ್‌ ಮತ್ತು ಮೋಯಿನ್ ಅಲಿ ಅವರು ಹಣ್ಣುಗಾಯಿ ನೀರುಗಾಯಿ ಮಾಡಿದರು.

ಪ್ಲೇ ಆಫ್ ಹಂತ ಪ್ರವೇಶಿಸಲು ಜಯಿಸಲೇಬೇಕಾದ ಒತ್ತಡದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು  ಎಬಿಡಿ (69; 35ಎ, 12ಬೌಂ, 1ಸಿ) ಮತ್ತು ಮೋಯಿನ್ ಅಲಿ (65; 34ಎ, 2ಬೌಂ, 6 ಸಿ) ಅವರ ಅಬ್ಬರದ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 218 ರನ್‌ ಗಳಿಸಿತು.

ಲೀಗ್‌ನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್‌ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕಾಗಿ ಆರಂಭದಲ್ಲಿ ಫಲವೂ ಸಿಕ್ಕಿತು.  ಬ್ಯಾಟಿಂಗ್ ಅರಂಭಿಸಿದ ಆರ್‌ಸಿಬಿ ತಂಡದ ಪಾರ್ಥಿವ್ ಪಟೇಲ್ ಮೊದಲ ಎಸೆತದಲ್ಲಿಯೇ ಜೀವದಾನ ಪಡೆದರು. ಸಂದೀಪ್ ಶರ್ಮಾ ಅವರ ಎಸೆತದಲ್ಲಿ ಪಾರ್ಥಿವ್ ಪಟೇಲ್ ಕವರ್ಸ್‌ನತ್ತ ಹೊಡೆಯಲು ಯತ್ನಿಸಿದರು.

ಫೀಲ್ಡರ್ ದೀಪಕ್ ಹೂಡಾ ಡೈವ್ ಮಾಡಿ ಪಡೆದ ಕ್ಯಾಚ್‌ ಅನ್ನು ಕೈಚೆಲ್ಲಿದರು. ಆದರೆ ಈ ಅವಕಾಶವನ್ನು ಪಟೇಲ್ ಬಳಸಿಕೊಳ್ಳಲಿಲ್ಲ. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಸಿದ್ಧಾರ್ಥ್ ಕೌಲ್‌ಗೆ ಕ್ಯಾಚಿತ್ತರು. ಆಗ ಕ್ರೀಸ್‌ಗೆ ಬಂದ ಎಬಿಡಿಗೆ ಕ್ರೀಡಾಂಗಣದಲ್ಲಿದ್ದ 34 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಲಭಿಸಿತು. ಅದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾದ ಎಬಿಡಿ ಬೆಂಗಳೂರಿಗರಿಗೆ ಸಖತ್ ಮನರಂಜನೆ ನೀಡಿದರು.

ಆರಂಭದಿಂದಲೇ ಬ್ಯಾಟ್ ಬೀಸಿದ ಎಬಿಡಿ ಚೆಂಡನ್ನು ಬೌಂಡರಿಗೆರೆ ದಾಟಿಸುವಲ್ಲಿ ಮಗ್ನರಾದರು. ಕೇನ್ ಬಳಗದ ಬಿಗಿ ಫೀಲ್ಡಿಂಗ್‌ ನಡುವೆಯೂ ತಮ್ಮ ಆಟವನ್ನು ಮುಂದುವರಿಸಿದರು.  ಇಲ್ಲಿಯೂ ಇನಿಂಗ್ಸ್‌ ಆರಂಭಿಸಿದ್ದ ವಿರಾಟ್ ಕೊಹ್ಲಿ ಇನ್ನೊಂದು ಬದಿಯಲ್ಲಿ ತಣ್ಣಗೆ ಉಳಿದುಬಿಟ್ಟರು.

‘ಗೆಳೆಯ’ ಎಬಿಡಿ ಆಟವನ್ನು ಕಣ್ತುಂಬಿಕೊಂಡರು. ಆದರೆ, ಐದನೇ ಓವರ್‌ನಲ್ಲಿ ಸ್ಪಿನ್ನರ್ ರಶೀದ್ ಖಾನ್ ಎಸೆತದ ತಿರುವನ್ನು ಅಂದಾಜು ಮಾಡುವಲ್ಲಿ ಎಡವಿದ ಕೊಹ್ಲಿ ಕ್ಲೀನ್ ಬೌಲ್ಡ್‌ ಆದರು. ಕೇವಲ 12 ರನ್‌ ಗಳಿಸಿ ನಿರ್ಗಮಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 37 ರನ್‌ಗಳನ್ನಷ್ಟೇ ಸೇರಿಸಲು

|ಅವರಿಗೆ ಸಾಧ್ಯವಾಗಿತ್ತು. ಆದರೆ ನಿಜವಾದ ಆಟ ಆರಂಭವಾಗಿದ್ದು ಆಮೇಲೆಯೇ!

ಮೋಯಿನ್ ಮಿಂಚು: ಎಬಿಡಿ ಜೊತೆಗೂಡಿದ ಇಂಗ್ಲೆಂಡ್‌ನ ಆಲ್‌ರೌಂಡರ್ ಮೋಯಿನ್ ಅಲಿ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನರಾದರು. ಈ ಟೂರ್ನಿಯಲ್ಲಿ ಅವರು ಆಡಿದ ಮೂರನೇ ಪಂದ್ಯ ಇದು. ಬರೋಬ್ಬರಿ ಅರ್ಧ ಡಜನ್ ಸಿಕ್ಸರ್‌ಗಳನ್ನು ಸಿಡಿಸಿದ ಅವರು

ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿಸಿದರು.

ಎಬಿಡಿ ಜೊತೆಗೆ ಚುರುಕಾಗಿ ರನ್‌ ಗಳಿಸಿದ ಅವರು ಸ್ಕೋರ್‌ ಬೋರ್ಡ್‌ ಆರ್‌ಸಿಬಿ ಪರ ಮಿನುಗುವಂತೆ ಮಾಡಿದರು. ವಿಶ್ರಾಂತಿ ಪಡೆದಿದ್ದ ಭುವನೇಶ್ವರ್ ಕುಮಾರ್ ಬದಲು ಸ್ಥಾನ ಪಡೆದಿದ್ದ ಬೇಸಿಲ್ ಥಂಪಿ ದುಬಾರಿಯಾದರು. ಇವರಿಬ್ಬರ ಆಟಕ್ಕೆ ಬಸವಳಿದ ಥಂಪಿ ನಾಲ್ಕು ಓವರ್‌ಗಳಲ್ಲಿ  70 ರನ್‌ಗಳನ್ನು ನೀಡಿದರು.  ಎಬಿಡಿ ಮತ್ತು ಅಲಿ 3ನೇ ವಿಕೆಟ್‌ಗೆ 107 ರನ್ ಸೇರಿಸಿದರು. 15ನೇ  ಓವರ್‌ನಲ್ಲಿ ರಶೀದ್ ಖಾನ್‌ ಸ್ಪಿನ್ ಜಾಲದಲ್ಲಿ ಎಬಿಡಿ ಮತ್ತು ಅಲಿ ಔಟಾಗಿ ನಿರ್ಗಮಿಸಿದರು. ಆಗ ತಂಡದ ಮೊತ್ತ 14.4 ಓವರ್‌ಗಳಲ್ಲಿ 149 ರನ್‌ಗಳಾಗಿತ್ತು.

ಕಾಲಿನ್–ಖಾನ್ ಮಿಂಚು: ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ (40 ರನ್) ಮತ್ತು ಸರ್ಫರಾಜ್ ಖಾನ್  (ಔಟಾಗದೆ 22) ಅವರ ಅಬ್ಬರದ ಆಟದ ಫಲವಾಗಿ ಕೊನೆಯ ಐದು ಓವರ್‌ಗಳಲ್ಲಿ 68 ರನ್‌ಗಳು ಸೇರಿದವು. ಇದರಿಂದಾಗಿ ತಂಡವು ದ್ವಿಶತಕದ ಗಡಿ ದಾಟಿತು. ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್‌ ಫೀಲ್ಡರ್‌ಗಳು ಎರಡು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry