ಭಾನುವಾರ, ಮಾರ್ಚ್ 7, 2021
32 °C

ಮಂಗಳೂರು: ತಡರಾತ್ರಿ ಬಿರುಗಾಳಿ ಮಳೆಗೆ ಮರ, ವಿದ್ಯುತ್‌ ಪರಿವರ್ತಕ ಬಿದ್ದು 4 ಕಾರು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ತಡರಾತ್ರಿ ಬಿರುಗಾಳಿ ಮಳೆಗೆ ಮರ, ವಿದ್ಯುತ್‌ ಪರಿವರ್ತಕ ಬಿದ್ದು 4 ಕಾರು ಹಾನಿ

ಮಂಗಳೂರು: ನಗರದಲ್ಲಿ ಗುರುವಾರ ತಡರಾತ್ರಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ನಗರದ ಬಾಬುಗುಡ್ಡೆಯಲ್ಲಿ ಮರ ಬಿದ್ದು ವಿದ್ಯುತ್‌ ಪರಿವರ್ತಕ, ಕಾರುಗಳು ಜಖಂಗೊಂಡಿವೆ.

ತಡರಾತ್ರಿ 12ರ ಸುಮಾರಿಗೆ ಮಳೆ ಆರಂಭವಾಯಿತು. ನಸುಕಿನ 2.30ರ ವೇಳೆಗೆ ಬಿರುಗಾಳಿಗೆ ಮರ ಬಿದ್ದು ಬಾಬುಗುಡ್ಡೆಯಲ್ಲಿನ ವಿದ್ಯುತ್‌ ಪರಿವರ್ತಕ ಹಾಗೂ ನಾಲ್ಕು ಕಾರುಗಳು ಜಖಂಗೊಡವು.

ಬೆಳಿಗ್ಗೆ 9ರವರೆಗೂ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಮರಗಳು ಬಿದ್ದು ವಿದ್ಯುತ್‌ ಕಂಬ ಮುರಿತು ಪರಿವರ್ತಕಕ್ಕೆ ಹಾನಿಯಾಗಿರುವುದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಮುರಿದು ಬಿದ್ದ ಕಂಬಗಳು ಹಾಗೂ ಮರಗಳನ್ನು ತೆರವುಗೊಳಿಸಲಾಗುತ್ತಿದೆ.  

ವಿದ್ಯುತ್‌ ಪರಿವರ್ತಕವಿದ್ದ ಕಂಬ ಮುರಿದು ಬಿದ್ದಿರುವುದು.

ವಾಹನಗಳ ಮೇಲೆ ಬಿದ್ದ ಮರವನ್ನು ತೆರವುಗೊಳಿಸುತ್ತಿರುವುದು.

ವಿದ್ಯುತ್‌ ಕಂಬ ಮುರಿದು ಬಿದ್ದಿರುವುದು.

ಜಿಟಿ ಜಿಟಿ ಮಳೆ

ಬೀದರ್ ವರದಿ:
ಜಿಲ್ಲೆಯ ಹುಮನಾಬಾದ್‌ನಲ್ಲಿ ಮೋಡ ಕವಿದ ವಾತಾವರಣವಿದ್ದು, ಬೆಳಿಗ್ಗೆ ಜಿಟಿ ಜಿಟ ಮಳೆ ಆರಂಭವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.