ವಿಶ್ವನಾಥ್‌ಗೆ ಪುತ್ರನ ಮೂಲಕ ಬಿಜೆಪಿ ಒತ್ತಡ

7

ವಿಶ್ವನಾಥ್‌ಗೆ ಪುತ್ರನ ಮೂಲಕ ಬಿಜೆಪಿ ಒತ್ತಡ

Published:
Updated:
ವಿಶ್ವನಾಥ್‌ಗೆ ಪುತ್ರನ ಮೂಲಕ ಬಿಜೆಪಿ ಒತ್ತಡ

ಮೈಸೂರು: ‘ಬಿಜೆಪಿಗೆ ಬೆಂಬಲ ನೀಡುವಂತೆ ನಿಮ್ಮ ತಂದೆಗೆ ಹೇಳಿ ಎಂದು ಕೋರಿ ಹಲವು ಕರೆಗಳು ಬರುತ್ತಿವೆ’ ಎಂದು ಹುಣಸೂರಿನ ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರ ಪುತ್ರ ಪೂರ್ವಜ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.‌

‘ಕುದುರೆ ವ್ಯಾಪಾರ ನನ್ನ ತಂದೆಯ ಜತೆ ನಡೆಯದು. ನಾವೆಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವಕಾಶ ರಾಜಕಾರಣ ಮಾಡುವವರಲ್ಲ’ ಎಂದು ಬರೆದುಕೊಂಡಿದ್ದಾರೆ.‌

‘ಅಮಿಷಗಳಿಗೆ ಬಲಿಯಾಗುವವರು ನಾವಲ್ಲ ಎಂಬುದನ್ನು ಕರೆ ಮಾಡಿದವರಿಗೆ ತಿಳಿಸಲು ಬಯಸುತ್ತೇನೆ. ನನ್ನ ತಂದೆಯವರು ಮತದಾರರಿಗೆ ದ್ರೋಹ ಬಗೆಯುವವರಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry