ಮಂಗಳವಾರ, ಮಾರ್ಚ್ 2, 2021
26 °C

ಕರಣ್ ಹೊಸ ಸಿನಿಮಾಕ್ಕೆ ಕತ್ರೀನಾ ನಾಯಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಣ್ ಹೊಸ ಸಿನಿಮಾಕ್ಕೆ ಕತ್ರೀನಾ ನಾಯಕಿ?

ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದ ಸೇನಾಧಿಕಾರಿ ವಿಕ್ರಮ್‌ ಬಾತ್ರಾ ಅವರ ಜೀವನಚರಿತ್ರೆ ಆಧರಿಸಿ ಚಿತ್ರ ಮಾಡುವುದಾಗಿ ನಿರ್ದೇಶಕ ಕರಣ್ ಜೋಹರ್ ಹೇಳಿದ್ದರು. ಸೇನಾಧಿಕಾರಿ ವಿಕ್ರಮ್ ಪಾತ್ರಕ್ಕೆ ಸಿದ್ಧಾರ್ಥ್ ಮಲ್ಹೋತ್ರನನ್ನು ನಾಯಕನನ್ನಾಗಿ ಆರಿಸಿದ್ದ ಕರಣ್, ನಾಯಕಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಆದರೆ, ಆ ಗುಟ್ಟು ಈಗ ರಟ್ಟಾಗಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಕತ್ರೀನಾ ಕೈಫ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಈ ಗಾಳಿಸುದ್ದಿಗೆ ಇಂಬುಗೊಡುವಂತೆ ಈಗಾಗಲೇ ಕರಣ್‌ ಜೋಹರ್‌ ಹಾಗೂ ಸಿನಿಮಾ ತಂಡ ಕತ್ರೀನಾ ಜೊತೆ ಮಾತುಕತೆಯನ್ನೂ ನಡೆಸಿದೆ. ಚಿತ್ರತಂಡದ ಪ್ರಕಾರ ಈ ಪಾತ್ರಕ್ಕೆ ಕತ್ರೀನಾ ಅವರೇ ಸೂಕ್ತವಾಗಿದ್ದು, ಶೀಘ್ರದಲ್ಲೇ ಕತ್ರೀನಾ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ‘ಬಾರ್‌ ಬಾರ್‌ ದೇಖೊ’ ಚಿತ್ರದಲ್ಲಿ ಕತ್ರೀನಾ, ಸಿದ್ಧಾರ್ಥ್‌ ಮಲ್ಹೋತ್ರಾ ಜೋಡಿಯಾಗಿ ನಟಿಸಿದ್ದರು. ಆದರೆ ಈ ಜೋಡಿಯನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದರೂ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಮಾಡಿರಲಿಲ್ಲ. ಈ ಸಿನಿಮಾದಲ್ಲಿ ಜೋಡಿ ಮೋಡಿ ಮಾಡಲಿದೆಯೇ ನೋಡಬೇಕು. ಸದ್ಯ ಕತ್ರೀನಾ ಅವರು ಆನಂದ್‌ ಎಲ್‌. ರೇ ಅವರ ‘ಝೀರೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.