ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 19–5–1968

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಸೋಮವಾರದಿಂದ ನಾನಾ ಕಡೆ ಶಾಸನಬದ್ಧ ರೇಷ್ಮೆಗೂಡು ಮಾರುಕಟ್ಟೆ
ಬೆಂಗಳೂರು, ಮೇ 18– ಸೋಮವಾರ ರಾಜ್ಯದ ನಾನಾ ಕಡೆಗಳಲ್ಲಿ ರೇಷ್ಮೆಗೂಡು ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬರಲಿವೆ.

ಈ ಮಾರುಕಟ್ಟೆಗಳನ್ನು ಮೈಸೂರು ರೇಷ್ಮೆ ಬಿತ್ತನೆ ಮತ್ತು ಗೂಡು (ಉತ್ಪನ್ನ, ಪೂರೈಕೆ, ಹಂಚಿಕೆ ನಿಯಂತ್ರಣ) ಶಾಸನದಂತೆ ನಿರ್ಮಿಸಲಾಗುವುದು.

ಶ್ರೀ ಬನ್ಸೀಲಾಲ್: ಹರಿಯಾನದ ಹೊಸ ಮುಖ್ಯಮಂತ್ರಿ
ನವದೆಹಲಿ, ಮೇ 18– ಹರಿಯಾನ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ 38 ಜನ ಕಾಂಗ್ರೆಸ್ ಸದಸ್ಯರು ಇಂದು ಇಲ್ಲಿ ಸಭೆ ಸೇರಿ ಶಾಸಕ ಪಕ್ಷದ ನಾಯಕತ್ವಕ್ಕೆ ಶ್ರೀ ಬನ್ಸೀಲಾಲ್ ಅವರನ್ನು ನಿಲ್ಲಿಸಬೇಕೆಂದು ನಿರ್ಧರಿಸಿದರು.

ಕೇಂದ್ರ ಸರ್ಕಾರದ ಮಾಜಿ ಗೃಹಸಚಿವ ಶ್ರೀ ಜಿ.ಎಲ್‌. ನಂದಾ ಅವರ ನಿವಾಸದಲ್ಲಿ ಈ ಸಭೆ ನಡೆಯಿತು. ಕಾಂಗ್ರೆಸ್‌ ಶಾಸಕಪಕ್ಷವು ನಾಳೆ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡುವುದು.

ದಿನಕ್ಕೆ ಒಂದೇ ಸಲ ನಗರದಲ್ಲಿ ನೀರು
ಬೆಂಗಳೂರು, ಮೇ 18– ಮೇ 22 ರಿಂದ ಪ್ರತಿನಿತ್ಯ ಒಂದೇ ಒಂದು ಸಲ ಅಂದರೆ ಬೆಳಿಗ್ಗೆ 5 ರಿಂದ 9ರ ವರೆಗೆ ನಗರಕ್ಕೆ ನೀರು ಪೂರೈಸಲಾಗುವುದು ಎಂದು ಬೆಂಗಳೂರು ನೀರು ಪೂರೈಕೆ ಮಂಡಳಿಯ ಎಂಜಿನಿಯರ್ ಪ್ರಕಟಣೆ ನೀಡಿದ್ದಾರೆ.

ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟದ ಜಲಾಶಯಗಳಲ್ಲಿ ನೀರು ಕಡಿಮೆಯಿರುವುದರಿಂದ ನೀರು ಪೂರೈಕೆ ಕಾಲಾವಧಿಯನ್ನು ಐದು ಗಂಟೆಯಿಂದ ನಾಲ್ಕು ಗಂಟೆಗೆ ಇಳಿಸುವುದು ಅನಿವಾರ್ಯವಾಗಿದೆ ಎಂದೂ ನಾಗರಿಕರು ಸಹಕರಿಸಬೇಕೆಂದೂ ಎಂಜಿನಿಯರರು ಕೇಳಿ ಕೊಂಡಿದ್ದಾರೆ.

ಕೋಮು ಪಕ್ಷಗಳನ್ನು ನಿಷೇಧಿಸುವ ಪ್ರಶ್ನೆ: ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚೆ ಸಂಭವ
ನವದೆಹಲಿ, ಮೇ 18– ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರ ಅಧ್ಯಕ್ಷತೆಯಲ್ಲಿ ನಾಳೆ ಇಲ್ಲಿ ಸಮಾವೇಶಗೊಳ್ಳಲಿರುವ ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಪಕ್ಷಗಳ ಮೇಲೆ ನಿಷೇಧಾಜ್ಞೆ ವಿಧಿಸುವ ವಿಷಯ ಮುಖ್ಯವಾಗಿ ಚರ್ಚೆಗೆ ಬರಲಿದೆ.

ಈಗ ಇಂಥ ಕೋಮುವಾರು ಪಕ್ಷಗಳನ್ನು ನಿಷೇಧಿಸುವ ಅಧಿಕಾರ ಸರ್ಕಾರಕಿಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋಮುವಾರು ಪಕ್ಷಗಳನ್ನು ನಿಷೇಧಿಸುವ ಅಧಿಕಾರ ನೀಡಿಕೆ ಬಗ್ಗೆ ಸಮ್ಮೇಳನವು ಚರ್ಚಿಸುವ ಸಂಭವವಿದೆ.

ಕೋಮುವಾರು ಭಾವನೆಗಳನ್ನು ಪ್ರಚೋದಿಸುವ ಬರಹಗಳಲ್ಲಿ ತೊಡಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅಧಿಕಾರ ನೀಡುವ ವ್ಯವಸ್ಥೆ ಕುರಿತು ಸಮ್ಮೇಳನ ಚರ್ಚೆ ನಡೆಸಲಿದೆ.

ಕನ್ನಕಳ್ಳರಿಬ್ಬರ ‘ಕತ್ತಲುಕೋಟೆ’ ಪತ್ತೆ
ಬೆಂಗಳೂರು, ಮೇ 18– ಸುಮಾರು ಅರ್ಧ ಮೈಲಿ ಉದ್ದದ ತಮ್ಮದೇ ಆದ ‘ಸುರಂಗ ಮಾರ್ಗ ಹಾಗೂ ನೆಲಮಾಳಿಗೆ’ ಹೊಂದಿದ್ದ ಕುಪ್ರಸಿದ್ಧ ಕನ್ನಕಳ್ಳರಿಬ್ಬರನ್ನು ನಗರದ ಪೊಲೀಸರು ಇಂದು ಬಂಧಿಸಿ ಅವರ ‘ಕತ್ತಲು ಕೋಟೆ’ಯ ಮೇಲೆ ಬೆಳಕು ಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT