ಹೈದರಾಬಾದ್‌ನಿಂದ ಬೆಂಗಳೂರು ತಲುಪಿದ ಕಾಂಗ್ರೆಸ್, ಜೆಡಿಎಸ್ ಶಾಸಕರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬೆಳಿಗ್ಗೆ ಬೆಂಗಳೂರಿಗೆ ಕರೆ ತರಲಾಯಿತು.
ಖರೀದಿ’ ಭೀತಿಯಿಂದ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದ ಶಾಸಕರನ್ನು ಗುರುವಾರ ರಾತ್ರಿ ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ಗೆ ಕಾಂಗ್ರೆಸ್ ಸ್ಥಳಾಂತರಿಸಿತ್ತು. ಶಾಂಗ್ರಿಲಾ ಹೋಟೆಲ್‌ನಲ್ಲಿದ್ದ ತನ್ನ ಶಾಸಕರ ವಾಸ್ತವ್ಯವನ್ನೂ ಜೆಡಿಎಸ್ ಹೈದರಾಬಾದ್‌ಗೆ ಬದಲಿಸಿತ್ತು. ಇದೀಗ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ಶಾಸಕರನ್ನು ಕರೆದುಕೊಂಡು ಬರುತ್ತಿರುವ ಬಸ್‌ಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶಾಸಕರು ನಗರದ ಪ್ರಮುಖ ಹೋಟೆಲ್ ಅಥವಾ ರೆಸಾರ್ಟ್‌ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದು, ಸುಮಾರು 11 ಗಂಟೆ ವೇಳೆಗೆ ವಿಧಾನಸಭೆಗೆ ಹಾಜರಾಗಲಿದ್ದಾರೆ.
ಇನ್ನಷ್ಟು...
* ವಿಧಾನಸೌಧದತ್ತ ಎಲ್ಲರ ಚಿತ್ತ : ‘ವಿಶ್ವಾಸ’ದ ಸದನ ಕುತೂಹಲ
* ಬಿಜೆಪಿ ‘ಕುದುರೆ ವ್ಯಾಪಾರ’ಕ್ಕೆ ಯತ್ನಿಸಿದ್ದಕ್ಕೆ ದಾಖಲೆ ಇದೆ: ಸಿದ್ದರಾಮಯ್ಯ ಆರೋಪ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.