ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ: ಸುಪ್ರೀಂ ಕೋರ್ಟ್

ಬೆಂಗಳೂರು: ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶನಿವಾರ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ನ್ಯಾಯಪೀಠ, ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಯಲಿದ್ದಾರೆ ಎಂದು ಆದೇಶಿಸಿದೆ.
ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿರುವ ಬೋಪಯ್ಯ, ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನೂ ನಿರ್ವಹಿಸಲಿದ್ದಾರೆ. ಈ ನೇಮಕಕ್ಕೆ ತಕರಾರು ತೆಗೆದು ಕಾಂಗ್ರೆಸ್, ಜೆಡಿಎಸ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ವಿಚಾರಣೆ ನಡೆಸಿತು.
‘ಸಾಂಪ್ರದಾಯಕ ಪದ್ಧತಿ ಇದ್ದರೂ ರಾಜ್ಯಪಾಲರ ನೇಮಕ ರದ್ದು ಮಾಡುವ ಅಧಿಕಾರ ನಮಗಿಲ್ಲ. ನಿರ್ದಿಷ್ಟ ವ್ಯಕ್ತಿಯನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವಂತೆ ರಾಜ್ಯಪಾಲರಿಗೆ ಸೂಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ' ಎಂದ ನ್ಯಾಯಮೂರ್ತಿ ಎ.ಕೆ.ಸಿಕ್ರಿ, ಶಾಸಕರ ಪ್ರಮಾಣ ಹಾಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನೇರ ಪ್ರಸಾರಕ್ಕೆ ಕೆಲವು ಸ್ಥಳಿಯ ಚಾನಲ್‌ಗಳಿಗೆ ಅವಕಾಶ ಕಲ್ಪಿಸಿ ಆದೇಶಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಬೋಪಯ್ಯ ಪ್ರೊ–ಟೆಮ್ (ತಾತ್ಕಾಲಿಕ ಅಥವಾ ಹಂಗಾಮಿ) ಸ್ಪೀಕರ್ ಆಗಿ ಮುಂದುವರಿದಿದ್ದಾರೆ. ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಸಂಪೂರ್ಣ ನೇರ ಪ್ರಸಾರವಾಗಲಿದೆ.
Hearing on Congress-JD(S) plea challenging appointment of pro tem speaker KG Bopaiah: SC says 'Law can't direct the Governor to appoint a particular person as Pro-tem Speaker. Unless convention becomes legal norm, it can't be enforced by Court'
— ANI (@ANI) May 19, 2018
ಇನ್ನಷ್ಟು: ಹಂಗಾಮಿ ಸ್ಪೀಕರ್ ಕೆಲಸವೇನು?
Hearing on Congress-JD(S) plea challenging appointment of pro tem speaker KG Bopaiah: SC says 'Law can't direct the Governor to appoint a particular person as Pro-tem Speaker. Unless convention becomes legal norm, it can't be enforced by Court'
— ANI (@ANI) May 19, 2018
Supreme Court rejects Congress-JD(S) plea challenging appointment of pro tem speaker KG Bopaiah, he will continue to be pro-tem speaker. #Karnataka pic.twitter.com/eMhgYgC0m9
— ANI (@ANI) May 19, 2018
Most important objective was to establish transparency. Since the statement has come from ASG that live feed of proceedings would be given, we hope & trust there would be fairness. I have no doubt that the victory would be of Congress & JD(S): Abhishek Manu Singhvi #Karnataka pic.twitter.com/bIBCybpRxQ
— ANI (@ANI) May 19, 2018
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.