ಮತದಾರರ ತೀರ್ಪಿಗೆ ತಲೆ ಬಾಗುವೆ: ಶಿರವಾಳ

7

ಮತದಾರರ ತೀರ್ಪಿಗೆ ತಲೆ ಬಾಗುವೆ: ಶಿರವಾಳ

Published:
Updated:

ಶಹಾಪುರ: ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಋಣ ತೀರಿಸಿರುವೆ. ಇನ್ನೂ ಅಭಿವೃದ್ಧಿ ಕೆಲಸ ಮಾಡಬೇಕು ಎಂಬ ಆಸಕ್ತಿ ಇತ್ತು. ಅದು ಸಾಧ್ಯವಾಗಿಲ್ಲ. ಮತದಾರರು ನೀಡಿದ ತೀರ್ಪಿಗೆ ತಲೆ ಬಾಗುವೆ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ತಿಳಿಸಿದರು.

ಗುರುವಾರ ಈ ಕುರಿತು ಹೇಳಿಕೆ ನೀಡಿದ ಅವರು, ‘ನನಗೆ 43 ಸಾವಿರಕ್ಕೂ ಹೆಚ್ಚು ಮತಗಳು ಬಿದ್ದಿವೆ. ಇಷ್ಟೊಂದು ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಹಲವಾರು ಹೆಜ್ಜೆ ಗುರುತು ಮೂಡಿಸುವ ಕೆಲಸ ಮಾಡಿದ್ದೇನೆ. ರೈತರ ಹಿತ ಕಾಪಾಡುವ ಉದ್ದೇಶದಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಲವು ಬಾರಿ →ಭಾಗವಹಿಸಿ, →ಬೇಸಿಗೆ ಹಂಗಾಮಿ ನಲ್ಲಿಯೂ →ಶಹಾಪುರ →ನಗರಕ್ಕೆ ಕಾಲುವೆ ಮೂಲಕ ನೀರು ಹರಿಸಿ ರೈತರ ಹಿತ ಕಾಪಾಡಿದ್ದೇನೆ. ಆದರೂ, ಗೆಲುವು ದೊರಕದಿದ್ದಾಗ ನಿರಾಶೆಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸೋಲಿಗೆ ಹೆದರುವುದಿಲ್ಲ. ಸೋಲಿಗೆ ಕಾರಣವಾದ ಬಗ್ಗೆ ಚಿಂತನೆ ನಡೆಸುವೆ. ಸಾರ್ವಜನಿಕ ಸಮಸ್ಯೆಗಳು ಎದುರಾದಾಗ ಜನರ ಮಧ್ಯನಿಂತು ಹೋರಾಟ ನಡೆಸುವೆ. ಕಾರ್ಯಕರ್ತರು ಹತಾಶರಾಗುವುದು ಬೇಡ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಸಾಗೋಣ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry