ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಿಂದ ಸದ್ದಿಲ್ಲದೆ ಪ್ರಚಾರ ಶುರು

ಈಶಾನ್ಯ ಪದವೀಧರರ ಕ್ಷೇತ್ರ: ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕ್ಷೇತ್ರ
Last Updated 19 ಮೇ 2018, 9:45 IST
ಅಕ್ಷರ ಗಾತ್ರ

ಬಳ್ಳಾರಿ: ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಈಶಾನ್ಯ ಪದವೀ ಧರರ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಜಿಲ್ಲೆಯಲ್ಲಿ ಸದ್ದಿಲ್ಲದೆ ಆರಂಭವಾಗಿದ್ದು, ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ.

ಚುನಾವಣಾ ಆಯೋಗ ಮೇ15ರಂದು ಅಧಿಸೂಚನೆ ಪ್ರಕಟಿ ಸಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಅವರ ಅಧಿಕಾರದ ಅವಧಿ ಜೂನ್‌21ರಂದು ಪೂರ್ಣಗೊಳ್ಳಲಿದೆ.

ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ ಎರಡು ಪ್ರಮುಖ ಪಕ್ಷಗಳ ಇಬ್ಬರು ಅಭ್ಯರ್ಥಿಗಳಾಗಿರುವುದು ವಿಶೇಷ. ಜೆಡಿಎಸ್‌ನಿಂದ ಪ್ರತಾಪ್‌ ರೆಡ್ಡಿ ಮತ್ತು ಬಿಜೆಪಿಯಿಂದ ಶ್ರೀನಿವಾಸ್‌ ಕಣಕ್ಕೆ ಇಳಿಯಲಿದ್ದಾರೆ. ಬೀದರ್‌ನ ಚಂದ್ರಕಾಂತ ಪಾಟೀಲ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಪಕ್ಷೇತರರಾಗಿ ಕಣಕ್ಕೆ ಇಳಿಯಲಿದ್ದಾರೆ.

2017ರ ನವೆಂಬರ್‌ನಿಂದ ಡಿಸೆಂಬರ್‌ ವರೆಗೂ ಮತದಾರರ ನೋಂದಣಿ ನಡೆದಿತ್ತು. ಆ ಅವಧಿಯಲ್ಲಿ ಪರಿಚಯದ ಪದವೀಧರರ ಹೆಸರು ನೋಂದಣಿಯಲ್ಲೂ ಆಕಾಂಕ್ಷಿಗಳು ಸಕ್ರಿಯರಾಗಿದ್ದರು. ವಿಧಾನಸಭೆ ಚುನಾವಣೆ ಬಳಿಕ ಆರೂ ಜಿಲ್ಲೆಗಳಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಪ್ರತಾಪ್‌ರೆಡ್ಡಿ ಮೇ 22ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯ ಶ್ರೀನಿವಾಸ್‌ ಅದಕ್ಕೂ ಮುಂಚೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಪ್ರಚಾರಕ್ಕಾಗಿ ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಅಬ್ದುಲ್‌ ರಜಾಕ್‌ ಎಸ್‌ಎಂಎಸ್‌ ಸಂದೇಶದ ಮೂಲಕ ಮತದಾರರ ಗಮನ ಸೆಳೆಯುತ್ತಿದ್ದಾರೆ. ಶ್ರೀನಿವಾಸ್‌ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಕರಪತ್ರಗಳನ್ನು ವಿತರಿಸಿದ್ದರು. ಪ್ರತಾಪ್‌ರೆಡ್ಡಿ ಪ್ರಚಾರ ಸದ್ದಿಲ್ಲದೆ ನಡೆದಿದೆ.

ಜಿಲ್ಲೆಯಲ್ಲಿ ಮೂವತ್ತು ಪ್ರದೇಶ

ಬಳ್ಳಾರಿ: ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಮೂವತ್ತು ಪ್ರದೇಶಗಳನ್ನು (ಪಾರ್ಟ್‌) ವಿಂಗಡಿಸಲಾಗಿದೆ. ಅವುಗಳ ವಿವರ ಹೀಗಿದೆ:
ಬಳ್ಳಾರಿ ನಗರ, ಗ್ರಾಮೀಣ, ಕಂಪ್ಲಿ: ಬಳ್ಳಾರಿ ನಗರ, ಗಾಂಧಿನಗರ, ಸತ್ಯನಾರಾಯಣಪೇಟೆ, ಕೌಲ್‌ಬಜಾರ್‌, ಕೋಳೂರು, ಕುರುಗೋಡು, ಮೋಕಾ ಮತ್ತು ರೂಪನಗುಡಿ.
ಹಡಗಲಿಯ ಹಡಗಲಿ ಪಟ್ಟಣ, ಹಿರೇಹಡಗಲಿ, ಇಟಗಿ
ಹಗರಿಬೊಮ್ಮನಹಳ್ಳಿಯ ಪಟ್ಟಣ, ಹಂಪಸಾಗರ, ಕೋಗಳಿ, ತಂಬ್ರಹಳ್ಳಿ.
ಹೊಸಪೇಟೆ ನಗರ, ಕಮಲಾಪುರ, ಕಂಪ್ಲಿ, ಮರಿಯಮ್ಮನಹಳ್ಳಿ.
ಕೂಡ್ಲಿಗಿಯ ಪಟ್ಟಣ, ಗುಡೇಕೋಟೆ, ಹೊಸಹಳ್ಳಿ, ಕೊಟ್ಟೂರು,
ಸಂಡೂರು ಪಟ್ಟಣ, ಚೋರನೂರು, ತೋರಣಗಲ್ಲು
ಸಿರುಗುಪ್ಪ ಪಟ್ಟಣ, ಕಾನೂರು, ತೆಕ್ಕಲಕೋಟೆ, ಹಚ್ಚೊಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT