7
ಎಲ್ಲರಿಗೂ ಲಸಿಕೆ: ಜಿಲ್ಲಾಧಿಕಾರಿ ಅನಿರುದ್ಧ ಸೂಚನೆ

26 ಗ್ರಾಮಗಳಲ್ಲಿ ಇಂದ್ರಧನುಷ್ ಲಸಿಕೆ

Published:
Updated:

ಬೀದರ್: ‘ಜಿಲ್ಲೆಯ 26 ಗ್ರಾಮಗಳಲ್ಲಿ ಮೇ 23, 25, 26, ಜೂನ್ 20, 22, 23 ಹಾಗೂ ಜುಲೈ 18, 20 ಮತ್ತು 21 ರಂದು ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ನಡೆಯಲಿದೆ’ ಎಂದು ಕಲಬುರ್ಗಿ ವಲಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ. ಅನಿಲಕುಮಾರ ತಾಳಿಕೋಟಿ ತಿಳಿಸಿದರು.

ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಔರಾದ್ ತಾಲ್ಲೂಕಿನ 10, ಬಸವಕಲ್ಯಾಣ ತಾಲ್ಲೂಕಿನ 7, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನ ತಲಾ 2 ಹಾಗೂ ಬೀದರ್ ತಾಲ್ಲೂಕಿನ 5 ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ’ ಎಂದು ಹೇಳಿದರು.

‘ದೇಶದ 28 ರಾಜ್ಯಗಳ 530 ಜಿಲ್ಲೆಗಳಲ್ಲಿ ಅಭಿಯಾನ ನಡೆದಿದೆ. ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ 28 ಜಿಲ್ಲೆಗಳ 625 ಗ್ರಾಮಗಳಲ್ಲಿ ನಡೆಯಲಿದೆ’ ಎಂದರು. ಣಿಯರಿಗೆ ಟಿಟಿ ಲಸಿಕೆ(ಧನುರ್ವಾಯು), ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೊಲಿಯೊ, ದಡಾರ, ರುಬೆಲ್ಲಾ ಪ್ರತ್ಯೇಕ ಲಸಿಕೆ, ಡಿಪಿಟಿ, ಹೈಪಟೈಟಿಸ್ ಬಿ. ಇನ್ಫ್ಲುಯೆಂಜಾ ಬಿ ಸೇರಿದ ಪೆಂಟಾವೆಲೆಂಟ್ ಹಾಗೂ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವುದು’ ಎಂದು ಕಾರ್ಯಕ್ರಮ ಅಧಿಕಾರಿ ಡಾ. ರವೀಂದ್ರ ಸಿರಸಗಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಅನಿರುದ್ಧ ಶ್ರವಣ ಅವರು, ‘ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮ ನಡೆಸಬೇಕು. ಗುರುತಿಸಲಾದ ಗ್ರಾಮಗಳಿಗೆ ಕಾರ್ಯಕ್ರಮ ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಬೇಕು. ಎಲ್ಲ ಫಲಾನುಭವಿಗಳಿಗೆ ತಪ್ಪದೆ ಲಸಿಕೆ ಹಾಕಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ಮಾತನಾಡಿ, ‘ಅಭಿಯಾನಕ್ಕೆ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ, ನಗರಸಭೆ ಆಯುಕ್ತ ಮನೋಹರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಈರಣ್ಣ ಪಾಂಚಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶ, ವೈದ್ಯಾಧಿಕಾರಿಗಳಾದ ಡಾ.ಅನಿಲ ಚಿಂತಾಮಣಿ, ಡಾ.ರಾಜಶೇಖರ ಪಾಟೀಲ, ಡಾ. ಶಿವಶಂಕರ ಬಿ. ಸಭೆಯಲ್ಲಿ ಇದ್ದರು.

**

ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಲಸಿಕೆ ಹಾಕಿಸಲು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬರಬೇಕು

ಡಾ. ಅನಿಲಕುಮಾರ ತಾಳಿಕೋಟಿ, ಕಲಬುರ್ಗಿ ವಲಯ ಸರ್ವೇಕ್ಷಣಾ ವೈದ್ಯಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry