ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಿಗೆ ಮುಖಂಡರೇ ಕಾರಣ’

Last Updated 19 ಮೇ 2018, 10:08 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಇಲ್ಲಿನ ವಿಧಾನಸಭಾ ಕ್ಷೇತ್ರದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ. ಮೋಹನಕುಮಾರಿ ಅವರು ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಅವರ ವಿರುದ್ಧ ಭಾರಿ ಅಂತರದಲ್ಲಿ ಸೋಲನ್ನಪ್ಪಿರುವುದಕ್ಕೆ ಮುಖಂಡರೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ.

ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಂತಿದ್ದ ಮತ್ತು ತಾಲ್ಲೂಕಿನ ಅಭಿವೃದ್ಧಿ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ಬಗ್ಗೆ ಒಲವಿದ್ದರೂ  ಜನತೆ ಕಾಂಗ್ರೆಸ್ ಅನ್ನು ತೆರೆ ಮರೆಗೆ ಸರಿಸಿದ್ದಾರೆ.

‘ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿಲ್ಲ, ಮನೆಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿಲ್ಲ, ಗ್ರಾಮದ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಒಬ್ಬ ವ್ಯಕ್ತಿಯನ್ನು ನಂಬಿಕೊಂಡಿರುವುದು ಮತ್ತು ಅಭ್ಯರ್ಥಿಯ ಹೊರತಾಗಿ ಯಾವ ಮುಖಂಡರು ಸಹ  ತಮ್ಮ ಪಂಗಡದೊಂದಿಗೆ ಪ್ರಚಾರ ನಡೆಸದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

‘ಕಳೆದ ಉಪಚುವಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ ಮೋಹನಕುಮಾರಿ ಅವರು ಗೆದ್ದ ನಂತರ ಕೆಲ ಗ್ರಾಮಗಳಿಗೆ ಭೇಟಿ ನೀಡಿಯೇ ಇಲ್ಲ, ಚುನಾವಣೆಯಲ್ಲಿ ನೀಡಿದ್ದ ಕೆಲ ಭರವಸೆಗಳನ್ನು ನೀಡಿಲ್ಲದ ಕಾರಣ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಮುಖಂಡರು ಬದಿಗೊತ್ತಿದ್ದರಿಂದ ಈ ಭಾರಿ ಸೋಲಾಗಿದೆ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಧನ್ಯವಾದ ಸಲ್ಲಿಸಿದ ಮೋಹನ ಕುಮಾರಿ: ‘ಸತತ 25 ವರ್ಷಗಳಿಂದ ನನ್ನ ಪತಿಗೆ ಅಧಿಕಾರ ನೀಡಿದ ಕ್ಷೇತ್ರದ ಜನತೆಗೆ ಮೊದಲಿಗೆ ವಂದನೆಗಳು. ಮತದಾರರ ತೀರ್ಪಿಗೆ ಎಲ್ಲರೂ ತಲೆ ಬಾಗಲೇ ಬೇಕು. ಒಂದು ವರ್ಷ ನನಗೆ ಅಧಿಕಾರ ನೀಡಿ ಕೈ ಹಿಡಿದು ನಡೆಸಿದ್ದಾರೆ ಇದನ್ನು ನಾನೆಂದೂ ಮರೆಯುವುದಿಲ್ಲ’ ಎಂದು ಮಾಜಿ ಸಚಿವೆ ಎಂ.ಸಿ.ಮೋಹನಕುಮಾರಿ ತಿಳಿಸಿದ್ದಾರೆ.

‘ಮತದಾರರೇ ನಿಜವಾದ ತೀರ್ಪುಗಾರರು. ಈ ಮೊದಲು ಅವರು ನನ್ನ ಕೈ ಹಿಡಿದಿದ್ದರು. ಈಗ ಅವರು ಬಿಜೆಪಿ ಪರ ಜನರು ತೀರ್ಪು ನೀಡಿದ್ದಾರೆ.

ಆರಿಸಿ ಬಂದವರು ಜನರಿಗೆ ಒಳ್ಳೆಯದನ್ನು ಮಾಡಿ ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಿ ಎಂಬುದೇ ನನ್ನ ಆಶಯ. ನಾನು ಇನ್ನೇನೂ ಹೇಳಲಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT