‘ದೇವೇಗೌಡರು ರಾಜಕೀಯ ಯುವಜನರಿಗೆ ಪ್ರೇರಣೆ’

7

‘ದೇವೇಗೌಡರು ರಾಜಕೀಯ ಯುವಜನರಿಗೆ ಪ್ರೇರಣೆ’

Published:
Updated:

‌ಶಿಡ್ಲಘಟ್ಟ: ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಇಂದಿಗೂ ಸ್ಮರಣೀಯ. ಅವರು ರೈತರ ಬಗೆಗೆ ಕಾಳಜಿ ಇರುವ ರಾಜಕಾರಣಿ ಎಂದು ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌. ರವಿಕುಮಾರ್‌ ಹೇಳಿದರು.

ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳಿಂದ ಕೇಕ್‌ ಕತ್ತರಿಸುವ ಮೂಲಕ ಜೆಡಿಎಸ್‌ ರಾಷ್ಟ್ರ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರ 86ನೇ ಜನ್ಮದಿನ ಆಚರಿಸಿ ಮಾತನಾಡಿದರು.

ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ, ರೈತರಿಗೆ ರಸಗೋಬ್ಬರ ಸಬ್ಸಿಡಿ, ಹುಬ್ಬಳ್ಳಿ ಈದ್ಗ ಸಮಸ್ಯೆ, ಕಾವೇರಿ ನೀರಿನ ಸಮಸ್ಯೆ, ಮಹದಾಯಿ ಸಮಸ್ಯೆ ಪರಿಹಾರಕ್ಕೆ ದೇವೇಗೌಡರ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದರು. ಅವರ ಹೋರಾಟದ ಹಾದಿ, ರಾಜಕೀಯ ಮೌಲ್ಯಗಳು ಯುವಜನರಿಗೆ ಮಾದರಿಯಾಗಿವೆ ಎಂದು ತಿಳಿಸಿದರು.

ದೇವೇಗೌಡ ಅವರದು ಅಪ ರೂಪದ ರಾಜಕೀಯ ವ್ಯಕ್ತಿತ್ವ. ಬಡವರ ಏಳಿಗೆಯೇ ಅವರ ಗುರಿ. ಮಾನವೀಯ ಗುಣ ಎಲ್ಲರಿಗೂ ಪ್ರೇರಣೆ ಎಂದರು.

‘ಮಾಜಿ ಶಾಸಕ ಎಂ. ರಾಜಣ್ಣ ಕಾಂಗ್ರೆಸ್‌ ಜೊತೆ ಕೈಜೋಡಿಸಿ ನನ್ನ ಸೋಲಿಗೆ ಕಾರಣರಾದರು. ಆದರೆ ಜನರು ನನ್ನ ಮೇಲಿದೆ. ಜನರ ಸಮಸ್ಯೆಗೆ ಸ್ಪಂದಿಸಿ ನಿರಂತರವಾಗಿ ಸೇವೆ ಸಲ್ಲಿಸಲು ಬದ್ಧವಾಗಿದ್ದೇನೆ. ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಪಕ್ಷದಿಂದ ಸವಲತ್ತು ಪಡೆದು ಮೋಸ ಮಾಡಿದವರಿಗೆ ಜನರೇ ಉತ್ತರ ನಿಡುತ್ತಾರೆ’ ಎಂದರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ಸಿಕಂದರ್, ಲಕ್ಷ್ಮಣ್, ಮುಖಂಡರಾದ ಚೀಮನಹಳ್ಳಿ ಗೋಪಾಲ್, ಹುಜುಗೂರು ರಾಮಣ್ಣ, ಲಕ್ಷ್ಮೀ ನಾರಾ ಯಣ್, ರಾಮಕೃಷ್ಣಪ್ಪ, ಆದಿಲ್ ಪಾಷಾ, ಗಂಜಿಗುಂಟೆ ಮೂರ್ತಿ, ರಾಜೇಶ್, ಶ್ರೀನಿವಾಸಗೌಡ, ಗಿರೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry