ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನದ ಮುಖ್ಯಮಂತ್ರಿಯಾಗಿ ಜಗದಾಂಬಿಕಾ ಪಾಲ್ ದಾಖಲೆ ಸರಿಗಟ್ಟಿದ ಯಡಿಯೂರಪ್ಪ

Last Updated 19 ಮೇ 2018, 12:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿಶ್ವಾಸ ಮತಗಳಿಸಲು ವಿಫಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ಮೂರು ದಿನಗಳ ಕಾಲ (55 ಗಂಟೆಗಳ ಕಾಲ) ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಈ ಮೂಲಕ ಜಗದಾಂಬಿಕಾ ಪಾಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅತೀ ಕಡಿಮೆ ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವ್ಯಕ್ತಿ ಎಂಬ ದಾಖಲೆ ಉತ್ತರಪ್ರದೇಶದ ಜಗದಾಂಬಿಕಾ ಪಾಲ್ ಎಂಬವರ ಹೆಸರಿನಲ್ಲಿದೆ. 1998 ಫೆಬ್ರುವರಿ 21 ರಿಂದ ಫೆ. 23ರ ವರೆಗೆ ಅಂದು ಕಾಂಗ್ರೆಸ್‍ನಲ್ಲಿದ್ದ ಜಗದಾಂಬಿಕಾ ಪಾಲ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಲ್ಯಾಣ್ ಸಿಂಗ್ ಅವರನ್ನು ಅಲ್ಲಿನ ರಾಜ್ಯಪಾಲರು ಉಚ್ಛಾಟನೆ ಮಾಡಿದಾಗ ಮುಖ್ಯಮಂತ್ರಿ ಪಟ್ಟ ಜಗದಾಂಬಿಕಾ ಪಾಲ್‍ಗೆ ಒಲಿದು ಬಂದಿತ್ತು. ಮೂರನೇ ದಿನ ಅಲಹಾಬಾದ್ ಹೈಕೋರ್ಟ್ ರಾಜ್ಯಪಾಲರ ತೀರ್ಮಾನವನ್ನು ರದ್ದು ಮಾಡಿದಾಗ ಜಗದಾಂಬಿಕಾ ಪಾಲ್ ಅವರ ಮುಖ್ಯಮಂತ್ರಿ  ಸ್ಥಾನ ಕೈಜಾರಿತು. ಇದಾದನಂತರ ಪಾಲ್ ಬಿಜೆಪಿಗೆ ಸೇರಿದ್ದರು.

ಇದೀಗ ಜಗದಾಂಬಿಕಾ ಪಾಲ್ ಮತ್ತು ಯಡಿಯೂರಪ್ಪ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನವಹಿಸಿದ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. 
ಎರಡನೇ ಸ್ಥಾನದಲ್ಲಿ ಬಿಹಾರದ ಸತೀಶ್ ಪ್ರಸಾದ್ ಶರ್ಮಾ ಇದ್ದಾರೆ, ಇವರು 5 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ನಂತರದ ಸ್ಥಾನದಲ್ಲಿನ  ಕೇರಳದ ಸಿ.ಎಚ್. ಮುಹಮ್ಮದ್ ಕೋಯಾ ಇದ್ದಾರೆ. ಇವರು 45 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT