ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಕೂಲಿ ಕಾರ್ಮಿಕರಿಗೆ ಸನ್ಮಾನ

Last Updated 19 ಮೇ 2018, 11:09 IST
ಅಕ್ಷರ ಗಾತ್ರ

ಮುಂಡರಗಿ: ‘ಚುನಾವಣೆ ಪೂರ್ವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ಗಂಟೆಯಲ್ಲಿ ರೈತರು ಹಾಗೂ ನೇಕಾರರ ₹1 ಲಕ್ಷ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ’ ಎಂದು ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.

ಪಟ್ಟಣದ ಎಕ್ಕಾಬಂಡಿ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಚುನಾವಣೆ ಪೂರ್ವದಲ್ಲಿ ಸ್ಥಳೀಯ ಎಕ್ಕಾಬಂಡಿ ಕಾರ್ಮಿಕರಿಗೆ ನೀಡಿದ ಎಲ್ಲ ಭರವಸೆಗಳನ್ನು ಶಾಸಕ ರಾಮಣ್ಣ ಲಮಾಣಿ ಈಡೇರಿಸಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ವಿಜಯಕುಮಾರ ರಾಠಿ ಮಾತನಾಡಿ, ‘ಎಕ್ಕಾ ಬಂಡಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಕೂಲಿ ಕಾರ್ಮಿಕರು ರಾಮಣ್ಣ ಲಮಾಣಿ ಅವರನ್ನು ಬೆಂಬಲಿಸಿ ದ್ದಾರೆ. ಅವರೆಲ್ಲರಿಗೂ ರಾಮಣ್ಣ ಲಮಾಣಿ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು’ ಎಂದರು.

ವಿಜಯಕುಮಾರ ಶಿಳ್ಳೀನ, ಆನಂದಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್, ಪರಶುರಾಮ ಕರಡಿಕೊಳ್ಳ, ಕೊಪ್ಪಣ್ಣ ಕೊಪ್ಪಣ್ಣವರ, ಗೋವಿಂದರಾಜ ಕರ್ನೂಲ, ಸುರೇಶ ಮೆದಕನಾಳ, ಫಕ್ಕೀರಪ್ಪ ಚಲವಾದಿ, ಜಂದಿಸಾಬ್ ಗರಡಿಮನಿ, ಸುರೇಶ ಸೀಮಣ್ಣವರ, ಸಣ್ಣೆಪ್ಪ ಕಪಗಲ್, ಬಾಬುಸಾಬ್ ಬಿಸ್ತಿ, ಖಾಸೀಂಸಾಬ್ ಬೆಟಗೇರಿ, ಖಾಜೇಸಾಬ್ ತಪ್ಪಡಿ, ಖಾಸೀಂಸಾಬ್ ಆಲೂರ, ಪೀರಸಾಬ್ ತಪ್ಪಡಿ, ಮುದಕಪ್ಪ ಮೆದಕನಾಳ, ಮರ್ದಾನಸಾಬ್ ವಡ್ಡಟ್ಟಿ, ಬಸವರಾಜ ಮೆದಕನಾಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT