ಆರ್‌ಎಸ್‌ಎಸ್‌ ಕೈಯಲ್ಲಿದೆ ರಾಜ್ಯಪಾಲರ ಅಧಿಕಾರ; ರಾಹುಲ್‌ ಗಾಂಧಿ ಆರೋಪ

7
ರಾಷ್ಟ್ರಗೀತೆಗೆ ಗೌರವ ಕೊಡದೆ ವಿಧಾನಸಭೆಯಿಂದ ಹೊರ ನಡೆದ ಬಿಜೆಪಿಗರು

ಆರ್‌ಎಸ್‌ಎಸ್‌ ಕೈಯಲ್ಲಿದೆ ರಾಜ್ಯಪಾಲರ ಅಧಿಕಾರ; ರಾಹುಲ್‌ ಗಾಂಧಿ ಆರೋಪ

Published:
Updated:
ಆರ್‌ಎಸ್‌ಎಸ್‌ ಕೈಯಲ್ಲಿದೆ ರಾಜ್ಯಪಾಲರ ಅಧಿಕಾರ; ರಾಹುಲ್‌ ಗಾಂಧಿ ಆರೋಪ

ನವದೆಹಲಿ: ‘ಬಿಜೆಪಿ ಶಾಸಕರು ಹಾಗೂ ಸ್ಪೀಕರ್‌ ರಾಷ್ಟ್ರಗೀತೆಗೂ ಮೊದಲು ವಿಧಾನಸೌಧದಿಂದ ಹೊರ ನಡೆದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಎಲ್ಲ ಜನರಿಗೆ ಅಗೌರವ ತರುವಂತೆ ನಡೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದರು.

ಶನಿವಾರ ಎಐಸಿಸಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು  ಮಾತನಾಡಿದರು.

‘ಯಾವುದೇ ಸಂಸ್ಥೆಯೂ ಆರ್‌ಎಸ್‌ಎಸ್ ಪ್ರಭಾವದಿಂದ ಹೊರತಾಗಿಲ್ಲ. ರಾಜ್ಯಪಾಲರ ಮೇಲೆಯೂ ಒತ್ತಡ ಮತ್ತು ಪ್ರಭಾವವಿದೆ. ರಾಜ್ಯಪಾಲರಿಗೂ ತಮ್ಮ ಅಧಿಕಾರ, ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಎಲ್ಲೆಡೆಯೂ ಆರ್‌ಎಸ್‌ಎಸ್‌ ಅಧಿಕಾರ ನಡೆಸುತ್ತಿದೆ. ಈಗಿನ ರಾಜ್ಯಪಾಲರು ರಾಜೀನಾಮೆ ನೀಡಿ ಮತ್ತೊಬ್ಬರು ಬಂದರೆ, ಅವರೂ ಸಹ ಆರ್‌ಎಸ್‌ಎಸ್‌ ಹೇಳಿದಂತೆಯೇ ಕೇಳುತ್ತಾರೆ’ ಎಂದರು.

ಇದನ್ನೇ ಬಿಜೆಪಿ ಎಲ್ಲ ರಾಜ್ಯಗಳಲ್ಲಿಯೂ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಸೇರಿ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

‘ಪ್ರಧಾನಿ ದೇಶಕ್ಕಿಂತ ದೊಡ್ಡವರಲ್ಲ, ಸಂಸತ್‌ಗಿಂತ ದೊಡ್ಡವರಲ್ಲ, ಸಾಂವಿಧಾನಿಕ ಸಂಸ್ಥೆಗಳಿಗಿಂತ ದೊಡ್ಡವರಲ್ಲ,...ಈ ದೇಶದ ಜನತೆಯಿಂದ ಆಯ್ಕೆ ಬಂದು ಪ್ರಧಾನಿಯಾದವರು ಎಲ್ಲರಲ್ಲೂ ಗೌರವ ಹೊಂದಿರುವುದು ಅಗತ್ಯ’ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಕುದುರೆ ವ್ಯಾಪಾರ ನಡೆಸಿ ಕೊಂಡುಕೊಳ್ಳಲು ಎಷ್ಟೇ ಪ್ರಯತ್ನಿಸಿದರು, ಸೆಳೆಯುವ ತಂತ್ರ ನಡೆಸಿದರು ಫಲ ನೀಡಲಿಲ್ಲ. ಈ ಬಗ್ಗೆ ಅನೇಕ ಮೊಬೈಲ್‌ ಫೋನ್‌ ಸಂಭಾಷಣೆಗಳೂ ಸಹ ಬಿಡುಗಡೆಯಾಗಿವೆ. ಇದರಿಂದ ಬಿಜೆಪಿ, ಆರ್‌ಎಸ್‌ಎಸ್‌ ತಕ್ಕ ಪಾಠ ಕಲಿತೆ ಎಂದು ರಾಹುಲ್‌ ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಜನತೆ, ಕಾಂಗ್ರೆಸ್‌ ಮುಖಂಡರು, ಜೆಡಿಎಸ್‌ನ ದೇವೇಗೌಡ ಅವರಿಗೆ ಧನ್ಯವಾದ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry