ಆತಂಕ ಸೃಷ್ಟಿಸಿದ ಹೊಗೆ

7

ಆತಂಕ ಸೃಷ್ಟಿಸಿದ ಹೊಗೆ

Published:
Updated:
ಆತಂಕ ಸೃಷ್ಟಿಸಿದ ಹೊಗೆ

ಕಾರವಾರ: ಇಲ್ಲಿನ ಬೈತಖೋಲ್‌ನ ಅಲೆ ತಡೆಗೋಡೆ ಇರುವ ಪ್ರದೇಶದಲ್ಲಿ ಕಿಡಿಗೇಡಿಗಳು ಫೈಬರ್‌ ವಸ್ತುಗಳಿಗೆ ಶುಕ್ರವಾರ ಹಾಕಿದ್ದ ಬೆಂಕಿಯಿಂದಾಗಿ ಸ್ಥಳೀಯರು ಕೆಲಕಾಲ ಆತಂಕಗೊಂಡರು.

‘ಸ್ಥಳೀಯರು ಇಲ್ಲಿ ಕಸ ಸುರಿಯುತ್ತಾರೆ. ಅವರಿಗೆ ಇಲ್ಲಿ ಕಸ ಸುರಿಯದಂತೆ ಹೇಳಿದರೂ ಅದನ್ನೇ ಮುಂದುವರಿಸುತ್ತಿದ್ದಾರೆ. ಬೆಳಿಗ್ಗೆ ಹೊತ್ತು ಇಲ್ಲಿ ಕಪ್ಪು ಹೊಗೆಯು ದಟ್ಟಾವಾಗಿ ಆವರಿಸಿಕೊಂಡಿತ್ತು. ಗಾಬರಿಗೊಂಡು ಪರಿಶೀಲಿಸಿದಾಗ ಕಸ ಸುರಿದು, ಫೈಬರ್ ವಸ್ತುಗಳಿಗೆ ಯಾರೊ ಬೆಂಕಿ ಹಚ್ಚಿದ್ದರು’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಂದರು ಅಧಿಕಾರಿಗಳು ತಿಳಿಸಿದರು.

ಸ್ಥಳೀಯರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry