ಕರುಣಾಳು ಕೊಡೆ

7

ಕರುಣಾಳು ಕೊಡೆ

Published:
Updated:
ಕರುಣಾಳು ಕೊಡೆ

ಕಪ್ಪು ಬಣ್ಣದ ಬಟ್ಟೆಯ ಹೊದ್ದ

ತಂತಿಯ ಎಲುಬಿನ ಹಂದರದಣ್ಣ

ಹಾಕಿ ಬ್ಯಾಟಿನ ಹಾಗೆಯೇ ಹೋಲುವ

ಹಿಡಿಯನು ಪಡೆದಿಹ ಕೊಡೆಯಣ್ಣ

ಮಳೆಗಾಲದಿ ತೊಯ್ಸದೆ ನಮ್ಮನು ತಾ

ಬೇಸಿಗೆಯಲಿ ತಂಪೆರೆಯುವನು

ಚಿಣ್ಣರ ಕೈಯಲಿ ಚಿಕ್ಕವನಿವ ತಾ

ಹಿರಿಯರ ಕೈಯಲಿ ದೊಡ್ಡವನು

 

ಗಾಳಿಯು ಭರ್ರನೆ ಬೀಸಲು ಗಕ್ಕನೆ

ಗಡಗಡ ನಡುಗುತ ಮುದುಡುವನು

ಕಡುಕೋಪದಿ ಹಿಡಿ ಶಾಪವ ಹಾಕುತ

ಗೋಡೆಯ ಮಾಡಲಿ ಕೂಡ್ರುವನು

ಗಾಳಿಯ ಹೊಡೆತಕೆ ಮುರಿದ್ಹೋದರು

ತಾ ಅಜ್ಜಗೆ ಆಸರೆಯಾಗುವನು

ಅಜ್ಜನ ಕೋಲಿದು ನನ್ನಯ ಕುದುರೆ

ಎನುವಾ ಚಿಣ್ಣರೊಡನಾಡುವನು

 

ಮಳೆ ಬಿಸಿಲಿಗೆ ತನ್ನಯ ಮೈಯೊಡ್ಡುತ

ಮನುಜುಪಕಾರಿಯಾಗಿಹನು

ಪರೋಪಕಾರದಿ ಸ್ವರ್ಗವು ಇಹುದು

ಎನುವುದ ಜಗಕೆ ಸಾರಿಹನು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry