ಗುರುವಾರ , ಫೆಬ್ರವರಿ 25, 2021
29 °C

ಲಾರಿ ಮಗುಚಿ 19 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಲಾರಿ ಮಗುಚಿ 19 ಮಂದಿ ಸಾವು

ಅಹಮದಾಬಾದ್‌: ಇಲ್ಲಿನ ಧೊಲೆರಾ ನಗರದ ಬಳಿಯ ಬವಲಿಯಾರಿ ಗ್ರಾಮದಲ್ಲಿ ಸಿಮೆಂಟ್‌ ಸಾಗಿಸುತ್ತಿದ್ದ ಲಾರಿ ಮಗುಚಿ 12 ಮಹಿಳೆಯರು, ಮೂವರು ಮಕ್ಕಳು ಸೇರಿ 19 ಮಂದಿ ಮೃತಪಟ್ಟಿದ್ದಾರೆ.

ಆರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಭಾವನಗರ ಜಿಲ್ಲೆಯ ಪಿಪವಾವ್‌ ಬಂದರಿನಿಂದ ಬರುತ್ತಿದ್ದ ಲಾರಿ ಅಹಮದಾಬಾದ್–ಭಾವನಗರ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿದೆ. ಲಾರಿಯಲ್ಲಿ 25 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು’ ಎಂದಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.