ವಿಶ್ವ ಪರ್ಯಟನೆ ಮುಗಿಸಿದ ನೌಕಾಪಡೆ ಮಹಿಳಾ ತಂಡ

7

ವಿಶ್ವ ಪರ್ಯಟನೆ ಮುಗಿಸಿದ ನೌಕಾಪಡೆ ಮಹಿಳಾ ತಂಡ

Published:
Updated:
ವಿಶ್ವ ಪರ್ಯಟನೆ ಮುಗಿಸಿದ ನೌಕಾಪಡೆ ಮಹಿಳಾ ತಂಡ

ಪಣಜಿ: ಭಾರತೀಯ ನೌಕಾಪಡೆಯ ‘ಐಎನ್‌ಎಸ್‌ವಿ ತಾರಿಣಿ’ ನೌಕೆ ಸೋಮವಾರ ಗೋವಾಕ್ಕೆ ಬರಲಿದೆ. ಎಂಟು ತಿಂಗಳು ವಿಶ್ವ ಪರ್ಯಟನೆಗೆ ತೆರಳಿದ್ದ ಈ ನೌಕೆಯಲ್ಲಿ ಆರು ಮಂದಿ ಮಹಿಳಾ ಅಧಿಕಾರಿಗಳೇ ಇದ್ದರು ಎಂಬುದು ವಿಶೇಷ. ಮಹಿಳಾ ಸಿಬ್ಬಂದಿಯೇ ಕೈಗೊಂಡ ಮೊದಲ ವಿಶ್ವ ಪರ್ಯಟನೆ ಇದಾಗಿದೆ.

ಪಣಜಿಗೆ ಬರಲಿರುವ ಮಹಿಳಾ ಅಧಿಕಾರಿಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಸ್ವಾಗತಿಸಲಿದ್ದಾರೆ. ಸೆಪ್ಟೆಂಬರ್‌ 10 ರಂದು ಈ ತಂಡ ಪ್ರಯಣ ಹೊರಟಿತ್ತು.

‘ನಾವಿಕ ಸಾಗರ ಪರಿಕ್ರಮ’ದ ನೇತೃತ್ವವನ್ನು ಲೆಫ್ಟಿನೆಂಟ್‌ ಕಮಾಂಡರ್‌ ವರ್ತಿಕಾ ಜೋಶಿ ವಹಿಸಿದ್ದರು. ತಂಡದಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಪ್ರತಿಭಾ ಜಮ್ವಾಲ್‌, ಲೆಫ್ಟಿನೆಂಟ್‌ಗಳಾದ ಪಿ.ಸ್ವಾತಿ, ವಿಜಯಾ ದೇವಿ, ಪಾಯಲ್ ಗುಪ್ತಾ ಮತ್ತು ಬಿ.ಐಶ್ವರ್ಯಾ ಇದ್ದರು. ಈ  ತಂಡಕ್ಕೆ ಕ್ಯಾಪ್ಟನ್‌ ದಿಲೀಪ್‌ ಧೋಂಡೆ ನೇತೃತ್ವದಲ್ಲಿ ತರಬೇತಿ ನೀಡಲಾಗಿತ್ತು.

21,600 ನಾಟಿಕಲ್‌ ಮೈಲು ದೂರವನ್ನು ತಂಡ ಕ್ರಮಿಸಿದೆ. ಭಾರತವೇ ನಿರ್ಮಿಸಿದ ನೌಕೆ ಐಎನ್‌ಎಸ್‌ವಿ ತಾರಿಣಿ, ಐದು ದೇಶಗಳಿಗೆ ಭೇಟಿ ನೀಡಿದ್ದು, ಸಮಭಾಜಕ ವೃತ್ತವನ್ನು ಎರಡು ಬಾರಿ ದಾಟಿ ಹೋಗಿದೆ. ನಾಲ್ಕು ಖಂಡಗಳು, ಮೂರು ಸಾಗರಗಳನ್ನು ಕ್ರಮಿಸಿ, ಮೂರು ಭೂಶಿರಗಳಾದ ಲೀಯುವಿನ್‌, ಹಾರ್ನ್‌ ಮತ್ತು ಗುಡ್‌ ಹೋಪ್‌ಗಳ ದಕ್ಷಿಣದಲ್ಲಿ ಪಯಣಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry