ಹಫೀಜ್‌ಗೆ ನೋಟಿಸ್

ಕರಾಚಿ: ನಿಯಮಬಾಹಿರ ಬೌಲಿಂಗ್‌ಗೆ ಸಂಬಂಧಪಟ್ಟಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ನಿಯಮಗಳ ಕುರಿತು ನೀಡಿದ್ದ ಹೇಳಿಕೆಗಳ ಬಗ್ಗೆ ವಿವರಣೆ ಕೋರಿ ಪಾಕಿಸ್ತಾನದ ಅಲ್‌ರೌಂಡರ್ ಮೊಹಮ್ಮದ್ ಹಫೀಜ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೋಟಿಸ್ ಜಾರಿ ಮಾಡಿದೆ.
ಸಂದರ್ಶನವೊಂದರಲ್ಲಿ ಬೌಲಿಂಗ್‌ಗೆ ಸಂಬಂಧಿಸಿದಂತೆ ಐಸಿಸಿಯು ರೂಪಿಸಿರುವ ನಿಯಮಾವಳಿಗಳ ಕುರಿತು ಹಫೀಜ್ ಅವರ ಹೇಳಿಕೆಗಳು ಸರಿಯಲ್ಲ. ಆದ್ದರಿಂದ ವಿವರಣೆ ಕೇಳಲಾಗಿದೆ ಎಂದು ಪಿಸಿಬಿಯ ಮೂಲಗಳು ತಿಳಿಸಿವೆ.
‘ವಿವಾದಿತ ಶೈಲಿ ಹೊಂದಿರುವ ಎಲ್ಲ ಬೌಲರ್‌ಗಳನ್ನೂ ಪರೀಕ್ಷೆಗೊಳಿಸಬೇಕು. ಆದರೆ ಹಾಗಾಗುತ್ತಿಲ್ಲ. ಈ ಬಗ್ಗೆ ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೇನೆ. ಆದರೆ, ನಾನು ಹೇಳಿದ ಕೆಲವು ಸಾಲುಗಳಿಗೆ ಮಾತ್ರ ಹೆಚ್ಚು ಒತ್ತು ಕೊಡುತ್ತಿರುವುದು ಸರಿಯಲ್ಲ’ ಎಂದು ಹಫೀಜ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.